ರಾಯಭಾಗ: ನೆರೆ ಸಂತ್ರಸ್ಥರಿಗೆ ನಿರ್ಮಿಸಿದ್ದ ಮನೆ ಅನರ್ಹರ ಪಾಲು!

ನೆರೆ ಸಂತ್ರಸ್ತರಿಗೆ ಅಂತ ಸರಕಾರವು ಕಳೆದ 14 ವರ್ಷಗಳ‌ ಹಿಂದೆ ಮನೆಗಳು ನಿರ್ಮಾಣ ಮಾಡಿತ್ತು ಆದರೆ ಅದರಲ್ಲಿ ನೆರೆ ಸಂತ್ರಸ್ತರಿಗೆ ನೀಡದ ಅಧಿಕಾರಿಗಳು ಅನರ್ಹರ ಕುಟುಂಬಗಳಿಗೆ ನೀಡು ಕೈ ತೊಳ್ಳೆದುಕೊಂಡಿದ್ದಾರೆ
ಗ್ರಾಮ ಪಂಚಾಯತಿ ಎದುರು ಧರಣಿ ನಿರತ ಗ್ರಾಮಸ್ಥರು
ಗ್ರಾಮ ಪಂಚಾಯತಿ ಎದುರು ಧರಣಿ ನಿರತ ಗ್ರಾಮಸ್ಥರು

ರಾಯಬಾಗ: ನೆರೆ ಸಂತ್ರಸ್ತರಿಗೆ ಅಂತ ಸರಕಾರವು ಕಳೆದ 14 ವರ್ಷಗಳ‌ ಹಿಂದೆ ಮನೆಗಳು ನಿರ್ಮಾಣ ಮಾಡಿತ್ತು ಆದರೆ ಅದರಲ್ಲಿ ನೆರೆ ಸಂತ್ರಸ್ತರಿಗೆ ನೀಡದ ಅಧಿಕಾರಿಗಳು ಅನರ್ಹರ ಕುಟುಂಬಗಳಿಗೆ ನೀಡು ಕೈ ತೊಳ್ಳೆದುಕೊಂಡಿದ್ದಾರೆ

ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಭಿರಡಿ ಗ್ರಾಮದ ನೆರೆ ಸಂತ್ರಸ್ತರಿಗೆ ಯಾಗಿರು ಅನ್ಯಾಯದ ವಿರುದ್ಧವಾಗಿ ಇಂದು ಭಿರಡಿ ಗ್ರಾಮ ಪಂಚಾಯತಿಗೆ ಬೀಗಾ ಹಾಕಿ ಅಹೋರಾತ್ರಿ ತರಣಿ ನಡೆಸುತ್ತಿದ್ದಾರೆ

2005 ರಲ್ಲಿ ಸಂಭವಿಸಿದ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಭಿರಡಿ ಗ್ರಾಮದ ರಿ.ಸ.ನಂ.21 ರಲ್ಲಿ ನಿರ್ಮಿಸಲಾದ ಮನೆಗಳನ್ನು ಅರ್ಹ ಸಂತ್ರಸ್ತರಿಗೆ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ, ಚಿಕ್ಕೋಡಿ ಉಪವಿಭಾಗ ಅಧಿಕಾರಿಗಳಿಗೆ & ತಾ.ಪಂ. ಅಧಿಕಾರಿಗಳಿಗೆ ಹತ್ತಾರೂ ಬಾರಿ ಮನವಿ ಸಲ್ಲಿಸಿದರು ಮನವಿಗೆ ಸ್ಪಂದಿಸದ ಅಧಿಕಾರಿಗಳ ಯಾವುದರ ಕ್ರಮ ಕೈಗೊಳ್ಳದ ಕಾರಣ ಇದು ಮುಂಜಾನೆಯಿಂದ ಗ್ರಾಮ ಪಂಚಾಯತಿಗೆ ಬೀಗಾ ಹಾಕಿ ಧರಣಿ ಸತ್ಯಾಗ್ರಹವನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ.

2005 ರಲ್ಲಿ ನಿರ್ಮಾಣವಾದ ನೆರೆ ಸಂತ್ರಸ್ತರ ಮನೆಗಳಲ್ಲಿ ಅನಧಿಕೃತವಾಗಿ ನೆಲೆಸಿರುವ ಅನರ್ಹ ಫಲಾನುಭವಿಗಳನ್ನು ತಕ್ಷಣ ಅಧಿಕಾರಿಗಳು ತೆರವು  ಮಾಡಬೇಕು, ಮತ್ತು ನಿಜವಾದ ಫಲಾನುಭವಿಗಳಿಗೆ ಮನೆ ವಿತರಣೆ ಮಾಡುವವರೆಗೆ ಧರಣಿ ಮುಂದುವರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಧರಣಿ ನಿರತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು ಪಂಚಾಯತಿ ಕಟ್ಟಡದ ಪಕ್ಕದಲ್ಲೇ ಪಕ್ಕದಲ್ಲಿ ಅಡುಗೆ ತಯಾರಿಸಿ ಹಗಲಿರುವು ಧರಣಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com