ಎಟಿಎಂಗಳಿಂದ ಎರಡೆರಡು ಬಾರಿ ಹಣ ತೆಗೆದು ಬ್ಯಾಂಕುಗಳಿಗೆ ವಂಚಿಸಿದ್ದ ಖದೀಮರು ಅಂದರ್!

ಎಟಿಎಂ ಯಂತ್ರದಿಂದ ಹಣ ಡ್ರಾ ಮಾಡಿಕೊಂಡಿದ್ದರೂ ಮತ್ತೊಮ್ಮೆ ಬ್ಯಾಂಕಿನ ಸಹಾಯವಾಣಿಗೆ ಕರೆ ಮಾಡಿ ಮತ್ತೊಂದು ಬಾರಿ ಹಣ ಪಡೆದು ವಂಚಿಸುತ್ತಿದ್ದ ಕುಖ್ಯಾತ ಹರಿಯಾಣ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಟಿಎಂಗಳಿಂದ ಎರಡೆರಡು ಬಾರಿ ಹಣ ತೆಗೆದು ಬ್ಯಾಂಕುಗಳಿಗೆ ವಂಚಿಸಿದ್ದ ಖದೀಮರು ಅಂದರ್
ಎಟಿಎಂಗಳಿಂದ ಎರಡೆರಡು ಬಾರಿ ಹಣ ತೆಗೆದು ಬ್ಯಾಂಕುಗಳಿಗೆ ವಂಚಿಸಿದ್ದ ಖದೀಮರು ಅಂದರ್

ಬೆಂಗಳೂರು: ಎಟಿಎಂ ಯಂತ್ರದಿಂದ ಹಣ ಡ್ರಾ ಮಾಡಿಕೊಂಡಿದ್ದರೂ ಮತ್ತೊಮ್ಮೆ ಬ್ಯಾಂಕಿನ ಸಹಾಯವಾಣಿಗೆ ಕರೆ ಮಾಡಿ ಮತ್ತೊಂದು ಬಾರಿ ಹಣ ಪಡೆದು ವಂಚಿಸುತ್ತಿದ್ದ ಕುಖ್ಯಾತ ಹರಿಯಾಣ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ಗುರುತಿಸುತ್ತಿದ್ದ ಆರೋಪಿಗಳು ಹಣ ಡ್ರಾ ಮಾಡುವ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಹಣ ಬಂದರೂ ಅದನ್ನು ತೆಗೆದುಕೊಳ್ಳದೆ ಯಂತ್ರದ ಸ್ವಿಚ್ ಆಫ್ ಮಾಡಿದ ಬಳಿಕ ಹಣ ಪಡೆದುಕೊಳ್ಳುತ್ತಿದ್ದರು. ಮಾತ್ರವಲ್ಲ ತಕ್ಷಣ ಬ್ಯಾಂಕಿನ ಸಹಾಯವಾಣಿಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ದೂರು ನೀಡುತ್ತಿದ್ದರು. ಆಗ ಬ್ಯಾಂಕ್‌ನವರಿಗೆ ಯಂತ್ರ ಸ್ವಿಚ್ ಆಫ್ ಆಗಿರುವುದರಿಂದ ಹಣ ಹೊರಗೆ ಹೋಗಿಲ್ಲ ಎಂದು ಭಾವಿಸಿ ಆರೋಪಿಗಳ ಖಾತೆಗೆ ಮತ್ತೊಮ್ಮೆ ಹಣ ಜಮೆ ಮಾಡುತ್ತಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಹರಿಯಾಣದ ನೂಹಾ ತಾಲ್ಲೂಕಿನ ಬಿಬಿಪುರದ ಶಹಜಾದ್(28) ಹಾಗೂ ಶಾಹೀದ್(23) ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ ಬಂಧಿತರಿಂದ ವಿವಿಧ ಬ್ಯಾಂಕ್‍ಗಳ 25 ಎಟಿಎಂ ಕಾರ್ಡ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ವಂಚಕರು ಬ್ಯಾಂಕುಗಳಿಗೆ ವಂಚಿಸಲಿಕ್ಕಾಗಿಯೇ ತಮ್ಮ ಸ್ನೇಹಿತರು, ಸಂಬಂಧಿಕರ ಹೆಸರಲ್ಲಿ  ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಕಾಪೆರ್ರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿ ಹೆಸರಾಂತ ಬ್ಯಾಂಕುಗಳಲ್ಲಿ ಖಾತೆ ತೆರೆದು ಎಟಿಎಂ ಕಾರ್ಡ್ ಗಳನ್ನು ಪಡೆದಿದ್ದಾರೆ.ಅಲ್ಲದೆ ಎಟಿಎಂ ದೋಚುವುದಕ್ಕಾಗಿ ಖದೀಮರು ಬೇರೆ ಬೇರೆ ಸ್ಥಳಗಳಿಗೆ ವಿಮಾನದಲ್ಲಿ ತೆರಳಿ ಅಲ್ಲಿನ ಐಷಾರಾಮಿ ಹೋಟೆಲ್ ಗಳಲ್ಲಿ ತಂಗುತ್ತಿದ್ದರು. 

ಗ್ಯಾಂಗ್ ನಕೃತ್ಯ ಸಂಬಂಧ ನವೆಂಬರ್ 0ರಂದು ದೆಹಲಿ ಮೂಲದ ಟ್ರಾನ್ಸ್‍ಕ್ಷನ್ ಸಲೂಷನ್ ಇಂಟರ್ ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಏರಿಯಾ ಮ್ಯಾನೇಜರ್ ಕುದ್ಹಾಬಕಾಷ್ ಖಾನ್ ಅವರು ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು.ಈ ಸಂಸ್ಥೆ ದೇಶದಲ್ಲಿ ಸುಮಾರು 14,000 ಎಟಿಎಂ ನಿರ್ವಹಣೆ ಮಾಡುತ್ತಿದ್ದು ಸಂಸ್ಥೆಯ ದೂರುಇನ ಹಿನ್ನೆಲೆ ತುರ್ತು ಕಾರ್ಯಾಚರಣೆ ನಡೆಸಿದ ಪೋಲೀಸರು ಖದೀಮರ ಬಂಧನದಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com