ಚುನಾವಣಾ ಪ್ರಚಾರ: ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿದ 'ಸಹೃದಯಿ ಸಚಿವ'

ಶಾಲೆ ಬಿಟ್ಟು ಯಾವುದೇ ಚಿಂತೆಯಿಲ್ಲದೇ ಮನೆಮುಂದೆ ಆಟವಾಡಿಕೊಳ್ಳುತ್ತಿದ್ದ ಮಕ್ಕಳಿಗೆ ಸೋಮವಾರ ಹೊಸದೊಂದು ಅಚ್ಚರಿ ಕಾದಿತ್ತು, ಮಹಾಲಕ್ಷ್ಮಿ ಲೇಔಟಿನ ಕುರುಬರಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿರುವ ವಿದ್ಯಾಮಂತ್ರಿ ಎಸ್,ಸುರೇಶ್ ಕುಮಾರ್ ತಮ್ಮ ಸಹೃದಯತೆ ಮೆರೆದಿದ್ದಾರೆ.
ಮತ್ತೆ ಶಾಲೆಗೆ ಸೇರಿದ ಮಕ್ಕಳು
ಮತ್ತೆ ಶಾಲೆಗೆ ಸೇರಿದ ಮಕ್ಕಳು

ಬೆಂಗಳೂರು:  ಶಾಲೆ ಬಿಟ್ಟು ಯಾವುದೇ ಚಿಂತೆಯಿಲ್ಲದೇ ಮನೆಮುಂದೆ ಆಟವಾಡಿಕೊಳ್ಳುತ್ತಿದ್ದ ಮಕ್ಕಳಿಗೆ ಸೋಮವಾರ ಹೊಸದೊಂದು ಅಚ್ಚರಿ ಕಾದಿತ್ತು, ಮಹಾಲಕ್ಷ್ಮಿ ಲೇಔಟಿನ ಕುರುಬರಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿರುವ ವಿದ್ಯಾಮಂತ್ರಿ ಎಸ್,ಸುರೇಶ್ ಕುಮಾರ್ ತಮ್ಮ ಸಹೃದಯತೆ ಮೆರೆದಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್,ಸುರೇಶ್ ಕುಮಾರ್ ಡ್ರಾಪ್ ಔಟ್ ಆಗಿದ್ದ ಇಬ್ಬರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿದ್ದಾರೆ, ಮಂಗಳವಾರ ಬೆಳಗ್ಗೆ 9.30ಕ್ಕೆ ಸರಿಯಾಗಿ  ಮಲ್ಲಪ್ಪ ಮತ್ತು ದೇವರಾಜ್  ಶಾಲೆಗೆ ತೆರಳಿದ್ದಾರೆ.  ಈ ಮಕ್ಕಳ ತಂದೆ ದೇವಪ್ಪಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಾಗಿದ್ದಾರೆ.  ಇವರ ಮಗ 8 ವರ್ಷದ ಮಲ್ಲಪ್ಪ, ಮತ್ತು ಆತನ ಸಹೋದರ ದೇವರಾಜ ಇಬ್ಬರನ್ನು ಕುರುಬರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದಾರೆ.

ಸಚಿವ ಸುರೇಶ್ ಕುಮಾರ್ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದರು, ಈ ವೇಳೆ ಮಲ್ಲಪ್ಪ ಅಲ್ಲಿ ಸೇರಿದ್ದ ಜನರನ್ನು ನೋಡುತ್ತಾ ನಿಂತಿದ್ದ,  ಈ ವೇಳೆ ನಮ್ಮ ಬಳಿಗೆ ಬಂದ ಅಂಕಲ್ ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ನಿಮ್ಮನ್ನು ಶಾಲಾಗೆ ಹೋಗಲು ಬಯಸುತ್ತೀರಾ ಎಂದು ಕೇಳಿದರು,  ನಾವು ಸಂತೋಷವಾಗಿ ಒಪ್ಪಿಕೊಂಡೆವು ಎಂದು ಮಲ್ಲಪ್ಪ ಹೇಳಿದ. ತಾನು ಸಚಿವರ ಜೊತೆ ಮಾತನಾಡುತ್ತಿದ್ದೇನೆ ಎಂಬ ಅರಿವು ಕೂಡ ಬಾಲಕನಿಗೆ ಇರಲಿಲ್ಲ,

ಶಾಲೆಗೆ ಸೇರಿಸುವಂತೆ ಬಾಲಕ ತನ್ನ ಪೋಷಕರ ಬಳಿ ಕೇಳುತ್ತಿದ್ದ, ಆದರೆ ಎಷ್ಟು ತಿಂಗಳು ಕಳೆದರೂ ಮಗನನ್ನು ಶಾಲೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ, ಈ ಮೊದಲು ದೇವಪ್ಪ ಮತ್ತು ಪತ್ನಿ ಉಲ್ಲಾಳದಲ್ಲಿರುವ ಮಲ್ಲತ್ತಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿನ ಕೆಲಸ ಮುಗಿದ ಮೇಲೆ ಕುರುಬರುಹಳ್ಳಿಗೆ ಬಂದಿದ್ದರು,ಆದರೆ ಇಲ್ಲಿ ಶಾಲೆಗೆ ಸೇರಿಸಲು ಆಗಿರಲಿಲ್ಲ,  ಸರಳ, ಸಜ್ಜನ ರಾಜಕಾರಣಿ ಎಂದೇ ಪ್ರಖ್ಯಾತರಾಗಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತೆ ತಮ್ಮ ಸಹೃದಯತೆಯನ್ನು ಮೆರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com