'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿಗಾರನ ಮೇಲೆ ಪೊಲೀಸ್ ದಬ್ಬಾಳಿಕೆ!

ಕರ್ನಾಟಕ ಉಪಚುನಾವಣೆ ಮತದಾನ ಅಂತಿಮ ಹಂತ ತಲುಪಿರುವಂತೆಯೇ ಇತ್ತ ಕೆಆರ್ ಪುರದಲ್ಲಿ ಅಮಾಯಕರ ಮೇಲೆ ಪೊಲೀಸರ ದಬ್ಬಾಳಿಕೆಯ ಕುರಿತು ವರದಿಯಾಗಿದೆ.
ವರದಿಗಾರನ ಮೇಲೆ ಪೊಲೀಸ್ ದಬ್ಬಾಳಿಕೆ
ವರದಿಗಾರನ ಮೇಲೆ ಪೊಲೀಸ್ ದಬ್ಬಾಳಿಕೆ

ಬೆಂಗಳೂರು: ಕರ್ನಾಟಕ ಉಪಚುನಾವಣೆ ಮತದಾನ ಅಂತಿಮ ಹಂತ ತಲುಪಿರುವಂತೆಯೇ ಇತ್ತ ಕೆಆರ್ ಪುರದಲ್ಲಿ ಅಮಾಯಕರ ಮೇಲೆ ಪೊಲೀಸರ ದಬ್ಬಾಳಿಕೆಯ ಕುರಿತು ವರದಿಯಾಗಿದೆ.

ಬೆಂಗಳೂರಿನ ಕೆಆರ್ ಪುರಂನಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದ್ದ ಕಾರ್ಯಕರ್ತನ ಮೇಲೆ ಎಸಿಪಿ ಕೃಷ್ಣಪ್ಪ ಎಂಬುವವರು ದಬ್ಬಾಳಿಕೆ ನಡೆಸಿದ್ದು, ಇದನ್ನು ಚಿತ್ರೀಕರಿಸುತ್ತಿದ್ದ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿಗಾರನ ಮೇಲೆಯೂ ಹಲ್ಲೆ ಮಾಡಿದ್ದಾರೆ.

ಕೆಆರ್ ಪುರಂನಲ್ಲಿ ಕಾರ್ಯಕರ್ತನೋರ್ವ ಮತದಾನದ ಜಾಗೃತಿ ಮೂಡಿಸುತ್ತಿದ್ದ. ಈ ವೇಳೆ ಹೊಯ್ಸಳ ವಾಹನದಲ್ಲಿ ಅಲ್ಲಿಗೆ ಆಗಮಿಸಿದ ಎಸಿಪಿ ಕೃಷ್ಣಪ್ಪ, ಕಾರ್ಯಕರ್ತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿಂದ ಬಲವಂತವಾಗಿ ಆತನನ್ನು ಕಳುಹಿಸುವ ಯತ್ನ ಮಾಡಲಾಗಿದ್ದು, ಇವಿಷ್ಟೂ ಘಟನಾವಳಿಗಳನ್ನು ಅಲ್ಲಿಯೇ ಚಿತ್ರೀಕರಿಸುತ್ತಿದ್ದ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿಗಾರನನ್ನು ನೋಡಿದ ಎಸಿಪಿ ಕೃಷ್ಣಪ್ಪ ಕೂಡಲೇ ಅವರ ಮೇಲೂ ಹಲ್ಲೆ ಮಾಡಿದ್ದಾರೆ.

ಎಸಿಪಿ ಕೃಷ್ಣಪ್ಪ ಅವರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕರ್ನಾಟಕ ಕೂಡ ಉತ್ತರ ಪ್ರದೇಶವಾಗುತ್ತಿದೆ. ಪೊಲೀಸ ದಬ್ಬಾಳಿಕೆ ಮಿತಿ ಮೀರುತ್ತಿದ್ದು, ಪೊಲೀಸರು ನಡುರಸ್ತೆಯಲ್ಲೇ ಅಮಾಯಕರನ್ನು ಥಳಿಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com