ಗುಂಡ್ಲುಪೇಟೆ: ಬೈಕ್​ ಬಸ್​ ಮಧ್ಯೆ ಅಪಘಾತ, ನವವಿವಾಹಿತೆ ಸೇರಿ ಇಬ್ಬರ ದುರ್ಮರಣ

ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.
 

Published: 05th December 2019 12:53 AM  |   Last Updated: 05th December 2019 12:53 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : RC Network

ಗುಂಡ್ಲುಪೇಟೆ: ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.

ಬೆಂಡಗಳ್ಳಿ ಗ್ರಾಮದ ನವವಿವಾಹಿತೆ ಕಾವ್ಯ(20) ಹಾಗೂ ಕಾವ್ಯಳ ಸಂಬಂಧಿ ಮಹೇಶ್​(30) ಮೃತಪಟ್ಟವರು, 

ಘಟನೆಯಲ್ಲಿ ಮೃತಳ ಪತಿ ರಾಜ್​ಕುಮಾರ್(28) ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ

.ಬೆಂಡಗಳ್ಳಿಯಿಂದ ಬೀಗರ ಔತಣ ಕೂಟ ಮುಗಿಸಿ ಗುಂಡ್ಲುಪೇಟೆಗೆ ತ್ರಿಬಲ್ ರೈಡಿಂಗ್​​ನಲ್ಲಿ ಬರುತ್ತಿದ್ದಾಗ ಬೈಕ್​ಗೆ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ

.ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ :- ಗೂಳಿಪುರ ನಂದೀಶ
 

Stay up to date on all the latest ರಾಜ್ಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp