ಬೆಂಗಳೂರು: ಇಂದು 'ಅಜರಾಮರ ಅಯೋಧ್ಯೆ' ಕೃತಿ ಬಿಡುಗಡೆ

ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.
ಅಜರಾಮರ ಅಯೋಧ್ಯೆ
ಅಜರಾಮರ ಅಯೋಧ್ಯೆ

ಬೆಂಗಳೂರು: ದೇಶದ ಶ್ರಮಿಕ, ಚಿಂತಕ ವರ್ಗದವರನ್ನು ಸಮಾನವಾಗಿ ಪ್ರಭಾವಿಸಿದ ರಾಮಜನ್ಮಭೂಮಿ ವಿವಾದವು ಜನರ ಸಂಘಟನೆ ಹಾಗೂ ರಾಜಕೀಯ ಆಯಾಮಗಳನ್ನು ಬದಲಿಸಿತು. ಇಂತಹಾ ರಾಮಜನ್ಮಭೂಮಿ, ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

"ಅಜರಾಮರ ಅಯೋಧ್ಯೆ" ಕೃತಿಯನ್ನು ಕೆವಿ ರಾಧಾಕೃಷ್ಣ ಅವರು ರಚಿಸಿದ್ದು ಡಿ.6ರ ಸಂಜೆ ಆರಕ್ಕೆ ಬಸವನಗುಡಿ ರಸ್ತೆಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪಕ್ಕದಲ್ಲಿನ "ಜಸ್ಟ್ ಬುಕ್ಸ್" ಅಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಅಯೋಧ್ಯೆ ತೀರ್ಪಿನ ಬಳಿಕ ಸಾಮಾನ್ಯ ಸಂವಹನದ ಕುರಿತು ಖ್ಯಾತ ಅಂಕಣಕಾರ ರೋಹಿತ್ ಅವರು ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com