ಗದಗ: ಮಹಿಳೆಯರಿಗೆ ಉಚಿತ ಡ್ರಾಪ್  ಸೇವೆ ಪ್ರಾರಂಭಿಸಿದ ಪೊಲೀಸರು

ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಗದಗ್ ನಲ್ಲಿ ಮಹಿಳೆಯರಿಗೆ ಉಚಿತ ಡ್ರಾಪ್ ಸೇವೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.

Published: 08th December 2019 02:00 PM  |   Last Updated: 08th December 2019 02:03 PM   |  A+A-


free_drop_service1

ಉಚಿತ ಡ್ರಾಪ್ ಸೇವೆ

Posted By : Nagaraja AB
Source : ANI

ಗದಗ: ಹೈದರಾಬಾದಿನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಹಾಗೂ ಉನ್ನಾವೋದಲ್ಲಿ ಅತ್ಯಾಚಾರ ಸಂತ್ರಸ್ಥೆ ಮೇಲೆ ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಗದಗ್ ನಲ್ಲಿ ಮಹಿಳೆಯರಿಗೆ ಉಚಿತ ಡ್ರಾಪ್ ಸೇವೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.

ಸಹಾಯವಾಣಿ ಸಂಖ್ಯೆ ಅಥವಾ ಯಾವುದೇ ಪೊಲೀಸ್ ಠಾಣೆಗೆ ಮಹಿಳೆಯರು ಒಂದು ಕರೆ ಮಾಡಿದರೆ ಸಾಕು ಅವರು ತಲುಪಬೇಕಾದ ಸ್ಥಳಗಳಿಗೆ ಉಚಿತವಾಗಿ ಪಿಕ್ ಅಪ್  ಮತ್ತು ಡ್ರಾಪ್ ಸೇವೆಯನ್ನು  ನೀಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.

ಗದಗ ಪೊಲೀಸರ ಈ ಕ್ರಮಕ್ಕೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ. ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡಿರುವ ಕ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp