ಬಾಗಲಕೋಟೆ: ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ದಂಪತಿ ದುರ್ಮರಣ, ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ!

ಕಲಾದಗಿ–ಕಾತರಕಿ ಸೇತುವೆ ಬಳಿಕ ನಡೆದ ವಾಹನ ಅಪಘಾತದಲ್ಲಿ ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಬೈಕ್ ಮೇಲಿದ್ದ ದಂಪತಿ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ.

Published: 09th December 2019 03:43 PM  |   Last Updated: 09th December 2019 03:43 PM   |  A+A-


Accident

ಅಪಘಾತದ ಚಿತ್ರ

Posted By : Vishwanath S
Source : RC Network

ಬಾಗಲಕೋಟೆ: ಕಲಾದಗಿ–ಕಾತರಕಿ ಸೇತುವೆ ಬಳಿಕ ನಡೆದ ವಾಹನ ಅಪಘಾತದಲ್ಲಿ ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಬೈಕ್ ಮೇಲಿದ್ದ ದಂಪತಿ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಹಿರೇಶೆಲ್ಲಿಕೇರಿಯ ಹನುಮಪ್ಪ ಲಕ್ಷ್ಮಣ ನಾಯ್ಕರ್(65), ಇವರ ಪತ್ನಿ ರುದ್ರವ್ವ ಹನುಮಪ್ಪ ನಾಯ್ಕರ್(55) ಎಂದು ಗುರುತಿಸಲಾಗಿದ್ದು, ಯಲ್ಲಪ್ಪ ಲಕ್ಷ್ಮಣ ಚಿಗರಿ(53), ಚಂದ್ರವ್ವ ಭೀಮಪ್ಪ ನಾಯ್ಕರ್(13) ಅವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಯಲ್ಲಪ್ಪ ಚಿಗರಿ, ಬೈಕ್ ಮೇಲೆ ನಾಲ್ವರನ್ನು ಕೂಡ್ರಿಸಿಕೊಂಡು ಬೈಕ್ ಚಾಲನೆ ಮಾಡುತ್ತಿದ್ದ, ಕಲಾದಗಿ- ಕಾತರಕಿ ಸೇರುವೆ ಬಳಿ ಕಬ್ಬು ತುಂಬಿದ ಟ್ರ್ಯಾಕ್ಟರ್‍ನ್ನು ಓವರ್ ಟೇಕ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬೈಕ್ ಸವಾರ ಯಲ್ಲಪ್ಪ ಚಿಗರಿ ನಾಲ್ವರನ್ನು ಕೂಡ್ರಿಸಿಕೊಂಡು ಹಿರೇಶೆಲ್ಲಿಕೇರಿಯಿಂದ ಬೀಳಗಿ ತಾಲೂಕಿನ  ಜಾನಮಟ್ಟಿಗೆ ಹೊರಟಿದ್ದರು. ಟ್ರ್ಯಾಕ್ಟರ್ ಓವರ್ ಟೇಕ್ ಮಾಡುವ ವೇಳೆ ಎದುರಿಗೆ  ಟಂಟಂ ಬಂದಿದೆ. ಆ ವೇಳೆ ಬೈಕ್‍ನಲ್ಲಿ ಹಿಂದೆ ಕುಳಿತಿದ್ದ ಇಬ್ಬರು ಟ್ರ್ಯಾಕ್ಟರ್ ಗಾಲಿಯಡಿ ಸಿಲುಕಿ ಮೃತಪಟ್ಟಿದ್ದಾರೆ.

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp