ಇಂದು ಸಿದ್ಧಾಂತಗಳ ಮೇಲೆ ಮತದಾನ ನಡೆಯುವುದಿಲ್ಲ: ನ್ಯಾ.ಸಂತೋಷ್ ಹೆಗ್ಡೆ

ಸಿದ್ಧಾಂತಗಳ ಮೇಲೆ ಚುನಾವಣೆ ನಡೆಯುವ ಕಾಲ ಈಗಿಲ್ಲ " ಹೀಗೆಂದು ಪ್ರತಿಕ್ರಿಯೆ ನೀಡಿದವರು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ. 
ನ್ಯಾ.ಸಂತೋಶ್ ಹೆಗ್ಡೆ
ನ್ಯಾ.ಸಂತೋಶ್ ಹೆಗ್ಡೆ

ಬೆಂಗಳೂರು: ಸಿದ್ಧಾಂತಗಳ ಮೇಲೆ ಚುನಾವಣೆ ನಡೆಯುವ ಕಾಲ ಈಗಿಲ್ಲ " ಹೀಗೆಂದು ಪ್ರತಿಕ್ರಿಯೆ ನೀಡಿದವರು 
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ. 

ಅನರ್ಹ ಶಾಸಕರಲ್ಲಿ ಒಬ್ಬ ಗೆದ್ದರೂ ಅದು ಪ್ರಜಾಪ್ರಭುತ್ವದ ಸೋಲಾಗುತ್ತದೆ ಎಂದು ಚುನಾವಣೆಗೆ ಮುನ್ನ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದರು. 

ಈ ಕುರಿತು ಯುಎನ್ಐ ಕನ್ನಡ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧಾಂತಗಳ ಮೇಲೆ ಈಗ ಮತದಾನ ನಡೆಯುವುದಿಲ್ಲ ಎಂಬುದು ನನ್ನ ಅನಿಸಿಕೆ ಎಂದರು.
  
ಅನರ್ಹರನ್ನು ಮತದಾರರು ಅರ್ಹರನ್ನಾಗಿ ಮಾಡಿದ್ದಾರೆ. ಅದನ್ನು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಒಂದು  ರೀತಿಯಲ್ಲಿ ಒಂದು ಪಕ್ಷಕ್ಕೆ ಬಹುಮತ ಬರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿಚಾರ ಎಂದರು. 

ಪದೇ ಪದೆ ಶಾಸಕರ ರಾಜೀನಾಮೆ ಪ್ರಹಸನಗಳು ಪುನರಾವರ್ತನೆಯಾಗಬಾರದು. ಚುನಾಯಿತರಾದವರು ಇನ್ನಾದರೂ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿ ಎಂಬುದಷ್ಟೇ  ನನ್ನ ಕೋರಿಕೆ ಎಂದರು.
  
ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ‘ಅರ್ಹ’ರಾದ ಮೇಲಷ್ಟೇ ವಿಧಾನಸಭೆ ಪ್ರವೇಶಿಸಬೇಕಿತ್ತು. ಆದ್ದರಿಂದ ಅನರ್ಹರಾಗಿಯೇ ಉಳಿದುಕೊಂಡವರು ಮುಂದಿನ ಚುನಾವಣೆಯವರೆಗೂ ಕಾಯಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com