ರಾಮನಗರದಲ್ಲಿ ರೇವ್ ಪಾರ್ಟಿ: 10 ಮಂದಿ ಬಂಧನ

ರಾಮನಗರ ತಾಲೂಕಿನ ವಿಭೂತಿಕೆರೆ ಬಳಿಯ ಮಾವಿನ ತೋಟದಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಮನಗರ ತಾಲೂಕಿನ ವಿಭೂತಿಕೆರೆ ಬಳಿಯ ಮಾವಿನ ತೋಟದಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

ಪಾರ್ಟಿ ಸ್ಥಳದಲ್ಲಿದ್ದ ಗಾಂಜಾ ಸೇರಿ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

ನಗರದ ಕೇಂದ್ರದಿಂದ 8 ಕಿಮೀ ದೂರದಲ್ಲಿ ರಾಮನಗರ-ಕನಕಪುರ ರಸ್ತೆ ಮಾರ್ಗಹದಲ್ಲಿರುವ ವಿಭೂತಿಕೆರೆ ಬಳಿಯ ಸುಮಾರು 32 ಎಕರೆ ಪ್ರದೇಶದ ಮಾವಿನ ತೋಟದಲ್ಲಿ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ತೋಟ ಬೆಂಂಗಳೂರು ಮೂಲಕ ವೆಂಕಟೇಶ್ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಮಧುಮಿತ ಎಂಬುವವರು ಪಾರ್ಟಿ ಆಯೋಜನೆ ಮಾಡಿದ್ದರು. ಇವರಿಗೆ ಪೌರಾಣಿಕ್ ಪುರೋಹಿತ್, ನಬಿರಾ, ರಿಚು ಎಂಬುವವರು ಸಾಥ್ ನೀಡಿದ್ದರು ಎಂದು ಹೇಳಲಾಗುತ್ತಿದೆ. 

ಮಂಜಾನೆ 3 ಗಂಟೆ ಸುಮಾರಿಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಕಂಡಿದ್ದಾರೆ. 

ರೇವ್ ಪಾರ್ಟಿಗಾಗಿ ತಿಂಗಳ ಹಿಂದೆಯೇ ತಂಡ ಯೋಜನೆ ರೂಪಿಸಿತ್ತು. ಇದಕ್ಕಾಗಿ ಮೊಬೈಲ್ ಆ್ಯಪ್ ಕೂಡ ಸಿದ್ಫಡಿಸಿಕೊಳ್ಳಲಾಗಿತ್ತು. ಇದರ ಮುಖಾಂತರವೇ ಪಾರ್ಟಿಗೆ ಯುವಕ ಮತ್ತು ಯುವತಿಯರನ್ನು ಆಹ್ವಾನಿಸಲಾಗಿತ್ತು. ದಾಳಿ ವೇಳೆ ಬೆಂಗಳೂರು, ತಮಿಳುನಾಡು, ಕೇರಳ ಮೂಲದ 500ಕ್ಕೂ ಹೆಚ್ಚು ಯುವಕ, ಯುವತಿಯರಿದ್ದರು. ಇವರಲ್ಲಿ 10ಯನ್ನು ಮಾತ್ರ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಪಾರ್ಟಿ ಆಯೋಜಕರ ವಿರುದ್ಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com