ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಮೆಟ್ರೋ: ರೈಲು ಸೇವಾ ಅವಧಿ ರಾತ್ರಿ 12ರವರೆಗೆ ವಿಸ್ತರಣೆ, ಜ.1 ರಿಂದ ಜಾರಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿಗಮ ಸಿಹಿ ಸುದ್ದಿ ನೀಡಿದ್ದು, ಜನವರಿ 1ರಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಅರ್ಧಗಂಟೆ ವಿಸ್ತರಿಸಲು ನಿರ್ಧರಿಸಿದೆ. 

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿಗಮ ಸಿಹಿ ಸುದ್ದಿ ನೀಡಿದ್ದು, ಜನವರಿ 1ರಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಅರ್ಧಗಂಟೆ ವಿಸ್ತರಿಸಲು ನಿರ್ಧರಿಸಿದೆ. 

ಮೆಟ್ರೋ ರೈಲು ಸಂಚಾರದ ಅವಧಿ ಜ.1ರಿಂದ ಅರ್ಧಗಂಟೆ ವಿಸ್ತರಣೆಗೊಳ್ಳಲಿದೆ. ಇದು ವಾರದ ಎಲ್ಲಾ ದಿನವೂ ಮುಂದುವರೆಯಲಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಯಾವುದೇ ಪ್ರಯಾಣಿಕರು ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮೆಜೆಸ್ಟಿಕ್-ನಾಗಸಂದ್ರ, ಮೆಜೆಸ್ಟಿಕ್-ಯಲಚೇನಹಳ್ಳಿ, ಮೆಜೆಸ್ಟಿಕ್-ಮೈಸೂರು ರಸ್ತೆ, ಮೆಜೆಸ್ಟಿಕ್-ಬೈಯಪ್ಪನಹಳ್ಳಿ ಹೀಗೆ 4 ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 12ಕ್ಕೆ ಹೊರಡಲಿದೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಅಥವಾ ಡಿ.31ರ ಹೊಸ ವರ್ಷಾಚರಣೆ ವೇಳೆ ಎಂ.ಜಿರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಹೊರಡುವ ಮೆಟ್ರೋ ರೈಲಿನ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿತ್ತು. ಈ ಹೊರತು ಇತರ ದಿನಗಳಲ್ಲಿ ಎಂದಿನಂತೆಯೇ ರಾತ್ರಿ 11ಕ್ಕೆ ಕೊನೆಯ ಮೆಟ್ರೋ ರೈಲು ಟರ್ಮಿನಲ್ ನಿಲ್ದಾಣಗಳಿಂದ ಹೊರಡುತ್ತಿತ್ತು. 

ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ಬಿಎಂಟಿಸಿ ಬಸ್ ಗಳು ತಡರಾತ್ರಿವರೆಗು ಸಂಚರಿಸಿದರೂ ಕೆಲವು ಕಡೆಗಳಲ್ಲಿ ಅನಾನುಕೂಲತೆ ಆಗುತ್ತಿದ್ದರಿಂದ ಮೆಟ್ರೋ ನಿಗಮದ ಮೇಲೆ ಹೆಚ್ಚಿನ ಒತ್ತಡ ಇತ್ತು. ಆದ್ದರಿಂದ ಜ.1ರಿಂದ ಆರ್ಧಗಂಟೆ ಅವಧಿ ವಿಸ್ತರಿಸಲಾಗಿದೆ. ಆದರೆ, ಮೊದಲು ಮೆಟ್ರೋ ರೈಲು ಸೇವಾ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com