ನಾಸಾ ಮಾಜಿ ವಿಜ್ಞಾನಿ, ವಿದ್ವಾಂಸ ಡಾ. ನವರತ್ನ ಎಸ್.ರಾಜಾರಾಮ್ ನಿಧನ

 ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ನಾಸಾ ದ ಮಾಜಿ ವಿಜ್ಞಾನಿ, ಹಿರಿಯ ವಿದ್ವಾಂಸರಾದ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ (76 ) ನಿಧನರಾಗಿದ್ದಾರೆ.
 

Published: 11th December 2019 01:58 PM  |   Last Updated: 11th December 2019 03:08 PM   |  A+A-


ನವರತ್ನ ಎಸ್.ರಾಜರಾಮ್

Posted By : Raghavendra Adiga
Source : Online Desk

ಬೆಂಗಳೂರು: ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ನಾಸಾ ದ ಮಾಜಿ ವಿಜ್ಞಾನಿ, ಹಿರಿಯ ವಿದ್ವಾಂಸರಾದ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ (76 ) ನಿಧನರಾಗಿದ್ದಾರೆ.

1943ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ರಾಜಾರಾಮ್ ಖ್ಯಾತ ಸಾಹಿತಿಗಳಾದ ನವರತ್ನ ರಾಮರಾಯರ ಮೊಮ್ಮಗನಾಗಿದ್ದರು.

ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ರಾಜಾರಾಮ್ ಎರಡು ದಶಕಗಳ ಕಾಲ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾರತದ ಮೂಲ ನಿವಾಸಿಗಳು ಆರ್ಯರಲ್ಲ ಎಂಬ ವಾದವನ್ನು ಒಪ್ಪಿಕೊಂಡಿದ್ದು ಅದಕ್ಕೆ ತಮ್ಮ ಸಂಶೋಧನೆಗಳ ಮೂಲಕ ಆಧಾರವನ್ನು ಒದಗಿಸಿದ್ದರು

ನಾಸಾದಲ್ಲಿ ಕೆಲ ಸಮಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದ ರಾಜಾರಾಮ್ ಬಳಿಕ ಭಾರತೀಯ ಇತಿಹಾಸ, ಸಂಸ್ಕೃತಿ, ರಾಷ್ಟ್ರಚಿಂತನೆಗಳ ಕುರಿತು ಒಲವು ತೋರಿದ್ದರು. ಈ ಸಂಬಂಧ ಅವರು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಬಹುಸಂಖ್ಯೆಯ ಪುಸ್ತಕಗಳನ್ನು ಹೊರತಂದಿದ್ದಾರೆ.

ಉತ್ತರ ಕರ್ನಾಟಕ ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಇವರ ಕುಟುಂಬಿಕರು ಒಂದೇ ತಲೆಮಾರಿನಲ್ಲಿ ಒಂಬತ್ತು ವಿಧ್ವಾಂಸರನ್ನು ಹೊಂದಿದ್ದರು. ಹಾಗಾಗಿ "ನವರತ್ನ" ಎಂಬ ಹೆಸರು ಇವರ ಕುಟುಂಬಕ್ಕೆ ಬಂದಿತ್ತು.
 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp