ಉನ್ನಾವೋ ಬಳಿಕ ಬೆಳಗಾವಿಯಲ್ಲಿ ನೀಚಕೃತ್ಯ! ಆಡಲು ಕರೆದೊಯ್ದ ಬಾಲಕಿಯ ಅತ್ಯಾಚಾರಗೈದ ಕಾಮುಕ

ಹೈದರಾಬಾದ್ ಮತ್ತು ಉನ್ನಾವೊದಲ್ಲಿ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಪ್ರಕರಣ ಹಸಿ ಹಸಿಯಾಗಿರುವಾಗಲೇ  26 ವರ್ಷದ ಯುವಕನೋರ್ವ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿರುವ ದುರ್ಬರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬುಧವಾರ ಸಂಜೆ ನಡೆದ ಅತ್ಯಾಚಾರ ಘಟನೆಯಿಂದ ಆಘಾತಕ್ಕೊಳಗಾದ ಕಾಡೋಲಿ ಗ್ರಾಮಸ್ಥರು ಗುರುವಾರ ಸಂಜೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಭೆ ನಡೆಸಿ ಆರೋಪಿಗೆ  ಕಠ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಹೈದರಾಬಾದ್ ಮತ್ತು ಉನ್ನಾವೊದಲ್ಲಿ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಪ್ರಕರಣ ಹಸಿ ಹಸಿಯಾಗಿರುವಾಗಲೇ  26 ವರ್ಷದ ಯುವಕನೋರ್ವ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿರುವ ದುರ್ಬರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬುಧವಾರ ಸಂಜೆ ನಡೆದ ಅತ್ಯಾಚಾರ ಘಟನೆಯಿಂದ ಆಘಾತಕ್ಕೊಳಗಾದ ಕಾಡೋಲಿ ಗ್ರಾಮಸ್ಥರು ಗುರುವಾರ ಸಂಜೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಭೆ ನಡೆಸಿ ಆರೋಪಿಗೆ  ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಶುಕ್ರವಾರ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ.

ಸುನಿಲ್ ಬಾಲು ಬೈನಾಯಕ್  (26) ಎಂಬಾತನೇ ಆರೋಪಿಯಾಗಿದ್ದು ಈತ ಖಾಸಗಿ ಟೆಂಪೋ ಚಾಲಕನಾಗಿದ್ದ.  ಬುಧವಾರ ಸಂಜೆ 5.30 ರ ಸುಮಾರಿಗೆ ನಡೆದ ಘಟನೆಗೆ ಸಂಬಂಧಿಸಿ ಗುರುವಾರ ಬೆಳಿಗ್ಗೆ ಆರೋಪಿಯನ್ನು ಆತನ ಮನೆಯಲ್ಲಿರುವಾಗಲೇ ಬಂಧಿಸಲಾಗಿದೆ. ಎಂದು ಕಾಕತಿ ಪೋಲೀಸರು ಹೇಳೀದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ಭದ್ರತೆಯನ್ನೂ ಲೆಕ್ಕಿಸದೆ ನುಗ್ಗಿದ ಕೆಲ ಸಾರ್ವಜನಿಕರು ಆರೋಪಿಗೆ ಮನಬಂದ್ಂತೆ ಥಳಿಸಿದ್ದಾರೆ.

ಆರೋಪಿ ಸುನೀಲ್ ಸಂತ್ರಸ್ಥೆ ಬಾಲಕಿಯ ನೆರೆಮನೆಯವನಾಗಿದ್ದು ಆಕೆಯ ಕುಟುಂಬಕ್ಕೆ ಪರಿಚಿತನಾಗಿದ್ದ. ಅವನು ಆಗಾಗ್ಗೆ ಅವಳೊಂದಿಗೆ ಆಟವಾಡುತ್ತಿದ್ದನು ಮತ್ತು ಅವಳಿಗೆ ಚಾಕೊಲೇಟುಗಳನ್ನು ಕೊಡುತ್ತಿದ್ದ. ಬುಧವಾರ ಸಂಜೆ, ಅವನು ಆಟದ ಮೈದಾನಕ್ಕೆ ಕರೆದೊಯ್ಯುವ ನೆಪದಲ್ಲಿ ಬಾಲಕಿಯನ್ನು ಮತ್ತು ಅವಳ ಐದು ವರ್ಷದ ಸಹೋದರನನ್ನು ತನ್ನ  ಟೆಂಪೋದಲ್ಲಿ ಕರೆದೊಯ್ದಿದ್ದಾನೆ. ಆದರೆ ಆಟದ ಮೈದಾನಕ್ಕೆ ಬದಲು ಆತ ಮಕ್ಕಳನ್ನು ತಮ್ಮ ತೋಟದ ಮನೆಗೆ ಕರೆದೊಯ್ದಿದ್ದ. 

ಮಕ್ಕಳು ಎಷ್ಟು ಸಮಯವಾಗಿದ್ದರೂ ಮನೆಗೆ ಬಾರದೆ ಹೋದಾಗ ಮಕ್ಕಳ ತಂದೆ ಮಕ್ಕಳನ್ನು ಹುಡುಕಿ ಆಟದ ಮೈದಾನಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಆತ ತನ್ನ ಮಗನನ್ನು ಟೆಂಪೋದಲ್ಲಿ ಲಾಕ್ ಮಾಡಿರುವುದನ್ನು ಕಂಡ ಆತನಿಗೆ ಆಘಾತವಾಗಿದೆ.ಆಗ ತನ್ನ ಸೋದರಿಯನ್ನು ಆರೋಪಿ ತೋಟದ ಮನೆಗೆ ಕರೆದೊಯ್ದಿದ್ದಾಗಿಆ ಮಗು ತಿಳಿಸಿದೆ. ಕೂಡಲೇ ತೋಟದ ಮನೆ ಬಾಗಿಲು ಮುರಿದ ಆತ ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾನೆ. 

ಇನ್ನು ಮೂಲಗಳ ಪ್ರಕಾರ, ಆರೋಪಿಯ ತಂದೆ ದೆ ತನ್ನ ಮಗನನ್ನು ರಕ್ಷಿಸುವ ಪ್ರಯತ್ನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಮೊದಲು ಸಂತ್ರಸ್ತೆಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನಿಸಿದರು. ಅಲ್ಲದೆ ದೂರು ನೀಡದಂತೆ ತಡೆಯಲು ಆರೋಪಿಗಳ ಕುಟುಂಬ ಸಂತ್ರಸ್ಥೆಯ ಕುಟುಂಬಕ್ಕೆ ದೊಡ್ಡ ಪ್ರಮಾಣದ ಹಣದ ಆಮಿಷ ಒಡ್ಡಿತ್ತು. ಆದರೆ ಇದನ್ನು ಲೆಕ್ಕಿಸದೆ ಸಂತ್ರಸ್ಥ ಬಾಲಕಿಯ ಪೋಷಕರು ಎಫ್ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ನಂತರ, ಪೊಲೀಸರು ಗುರುವಾರ ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಪೊಲೀಸರು ಆತನನ್ನು ನ್ಯಾಯಾಲಯದಿಂದ ಹೊರಗೆ ಕರೆತರುತ್ತಿದ್ದಾಗ ಕೋಪಗೊಂಡ ಜನಸಮೂಹ ಪೊಲೀಸ್ ಭದ್ರತೆಯನ್ನು ಮುರಿದು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದೆ. ನಂತರ ಆತನನ್ನು ಜನರಿಂದ ಬಿಡಿಸಿದ ಪೋಲೀಸರು ತಕ್ಷಣ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.

ದಾಳಿಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರಲ್ಲಿ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶ್ರೀ ರಾಮಸೇನೆಯ ಸ್ಥಳೀಯ ಕಾರ್ಯಕರ್ತರು ಬಂಧಿತರ ಬಿಡುಗಡೆಗೆ ಒತ್ತಾಯಿಸಿ ನ್ಯಾಯಾಲಯದ ರಸ್ತೆತಡೆ ನಡೆಸಿದ್ದಾರೆ.ಆದರೆ ಪೋಲೀಸರು ಪ್ರತಿಭಟನಾಕಾರರ ಮನವೊಲಿಒಕೆಗೆ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com