ಪ್ರಯಾಣಿಕ ಬಿಟ್ಟುಹೋಗಿದ್ದ 10 ಲಕ್ಷ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 10 ಲಕ್ಷ ರು. ಹಣವನ್ನು ಹಿಂತಿರುಗಿಸುವ ಮೂಲಕ ಬೆಂಗಳೂರು ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ವಿಶೇಷವೆಂದರೆ ಸಿಲಿಕಾನ್ ಸಿಟಿಯಲ್ಲಿ ಹೃದಯ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ದೂರದ ಮಾಲ್ದೀವ್ಸ್ ದೇಶದಿಂದ ಬಂದಿದ್ದ ಪ್ರಜೆಯೊಬ್ಬನ ಹಣ ಇದಾಗಿತ್ತು. ಮಾಲ್ದೀವ್ಸ್ ನಲ್ಲಿ ನೆಲೆಸಿರುವ  ಡಾ. ಎಂ. ಆರ್ ಭಾಸ್ಕರ್
ಪ್ರಯಾಣಿಕ ಬಿಟ್ಟುಹೋಗಿದ್ದ 10 ಲಕ್ಷ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಪ್ರಯಾಣಿಕ ಬಿಟ್ಟುಹೋಗಿದ್ದ 10 ಲಕ್ಷ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಬೆಂಗಳೂರು: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 10 ಲಕ್ಷ ರು. ಹಣವನ್ನು ಹಿಂತಿರುಗಿಸುವ ಮೂಲಕ ಬೆಂಗಳೂರು ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ವಿಶೇಷವೆಂದರೆ ಸಿಲಿಕಾನ್ ಸಿಟಿಯಲ್ಲಿ ಹೃದಯ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ದೂರದ ಮಾಲ್ದೀವ್ಸ್ ದೇಶದಿಂದ ಬಂದಿದ್ದ ಪ್ರಜೆಯೊಬ್ಬನ ಹಣ ಇದಾಗಿತ್ತು. ಮಾಲ್ದೀವ್ಸ್ ನಲ್ಲಿ ನೆಲೆಸಿರುವ  ಡಾ. ಎಂ. ಆರ್ ಭಾಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದು ಹೊರಟಾಗ ಹಣವನ್ನು ಆಟೋದಲ್ಲೇ ಬಿಟ್ಟು ಹೋಗೊದ್ದರು. ಇದನ್ನು ಗಮನಿಸಿದ ಆಟೋ ಚಾಲಕ ರಮೇಶ್​ ಬಾಬು ನಾಯಕ್ಆ ಭಾರೀ ಮೊತ್ತದ ಹಣವನ್ನು ಶೇಷಾದ್ರಿಪುರಂ ಇನ್ಸ್​ಪೆಕ್ಟರ್​​​ ಸಂಜೀವ್​ಗೌಡರಿಗೆ ತಂದುಕೊಟ್ಟಿದ್ದಾರೆ.

ಘಟನೆ ವಿವರ

ಭಾಸ್ಕರ್ ತಾವು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯಲು ಮಾಲ್ದೀವ್ಸ್ ನಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದಿದ್ದಾರೆ. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಹೊಟೆಲ್​​ ಒಂದರಲ್ಲಿಉ ಉಳಿದುಕೊಂಡಿದ್ದ ಅವರು ಅಲ್ಲಿಂದ ಆಸ್ಪತ್ರೆಗೆ ತೆರಳಿ ಚೆಕ ಪ್ ಮಾಡಿಸಿಕೊಂಡಿದ್ದಾರೆ. ಬಳಿಕ ಆಟೋ ಹತ್ತಿ ಹೋಟೆಲ್ ಗೆ ಹಿಂತಿರುಗಿದ್ದಾರೆ. ಆ ಸಮಯ ಚಿಕಿತ್ಸೆಗಾಗಿ ಇರಿಸಿಕೊಂಡಿದ್ದ 12 ಸಾವಿರ ಅಮೇರಿಕ ಡಾಲರ್​ ಮತ್ತು 1.5 ಲಕ್ಷ ದಷ್ಟು ಭಾರತೀಯ ರೂಪಾಯಿಗಳನ್ನು ಆಟೋದಲ್ಲೇ ಮರೆತು ಹೋಗಿದ್ದಾರೆ.

ಆಟೋದಲ್ಲಿ ಭಾರೀ ಮೊತ್ತದ ಹಣವಿರುವುದನ್ನು ಕಂಡ ಆಟೋ ಚಾಲಕ ರಮೇಶ್​ ಬಾಬು ಅದನ್ನು ಶೇಷಾದ್ರಿಪುರ ಪೋಲೀಸರಿಗೆ ತಂದೊಪ್ಪಿಸಿದ್ದಾನೆ. ಪೋಲೀಸರು ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿದ್ದಲ್ಲದೆ ಆತನಿಗೆ 2ಸಾವಿರ ನಗದು ನೀಡಿ ಗೌರವಿಸಿದ್ದಾರೆ. ಇದಲ್ಲದೆ ಭಾರೀ ಮೊತ್ತದ ಹಣ ಹಿಂತಿರುಗಿಸಿದ್ದಕ್ಕಾಗಿ ಭಾಸ್ಕರ್ ಸಹ ಆಟೋ ಚಾಲಕನಿಗೆ 5 ಸಾವಿರ ರು. ನಿಡಿ ಧನ್ಯವಾದ ಹೇಳಿದ್ದಾರೆ. ಇನ್ನು ನಗರ ಪೊಲೀಸ್ ಆಯುಕ್ತರು ಕೂಡ ಆಟೋ ಚಾಲಕನ ಪ್ರಾಮಾಣಿಕತೆಗೆ ಪ್ರಶಂಸೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com