ಹೈಕೋರ್ಟ್ ಮತ್ತು ಅಧೀನ ನ್ಯಾಯಲಯಗಳಿಗೆ ನಾಲ್ಕನೇ ಶನಿವಾರ ರಜೆ ರದ್ದು

ಕರ್ನಾಟಕ ಹೈಕೋರ್ಟ್ ಹಾಗೂ ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳಿಗೆ ಈ ಹಿಂದೆ ಘೋಷಿಸಲಾಗಿದ್ದ ನಾಲ್ಕನೇ ಶನಿವಾರದ ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶಿಸಿದೆ
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:  ಕರ್ನಾಟಕ ಹೈಕೋರ್ಟ್ ಹಾಗೂ ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳಿಗೆ ಈ ಹಿಂದೆ ಘೋಷಿಸಲಾಗಿದ್ದ ನಾಲ್ಕನೇ ಶನಿವಾರದ ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶಿಸಿದೆ.

ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಸಾರ್ವತ್ರಿಕ ರಜೆ ಘೋಷಿಸಿ ೨೦೧೯ ರ ಜೂ.೧೩ರಂದು ಅಧಿಸೂಚನೆ ಹೊರಡಿಸಲಾಗಿತ್ತು. 

ಆದರೆ,ಈ ಅಧಿಸೂಚನೆ ಯನ್ನು ಭಾಗಶ: ಮಾರ್ಪಡಿಸಿ ಡಿ.೧೨ ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿದ್ದುಪಡಿ ಮಾಡಿ ಸುತ್ತೋಲೆ ಹೊರಡಿಸಿದೆ.

ಆದರೆ ಹೊಸ ಸುತ್ತೋಲೆಯಂತೆ ಕರ್ನಾಟಕ ಉಚ್ಛನ್ಯಾಯಾಲಯ ಹಾಗೂ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಮತ್ತು ಆಯಾ ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ಸಮನ್ವಯಿಸಲು ನೇಮಿಸಲಾದ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ನ್ಯಾಯ ಪ್ರಕ್ರಿಯಿಗೆ ಹಾಜರಾಗುವ ಸರ್ಕಾರಿ ಅಧಿಕಾರಿಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ಈಗಿನಿಂದಲೇ ಜಾರಿಯಾಗುವಂತೆ ರದ್ದು ಮಾಡಲಾಗಿದೆ.

ನ್ಯಾಯಾಲಯ ಮತ್ತು ಅದಕ್ಕೆ ಸಂಬಂಧಿಸಿದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ನಾಲ್ಕನೇ ಶನಿವಾರ ರದ್ದಾಗಿದೆ. ಇತರೆ ಇನ್ನಾವ ಸರ್ಕಾರಿ ನೌಕರರು, ಅಧಿಕಾರಿಗಳಿಗೆ ನಾಲ್ಕನೇ ಶನಿವಾರ ರದ್ದಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com