ಕಲಬುರ್ಗಿ: ಡಿಫ್ತೀರಿಯಾಗೆ 7 ಮಂದಿ ಬಲಿ

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಜ್ವರಗಳ ಸರಣಿ ಆರಂಭವಾಗಿದ್ದು, ಅತ್ತ ಕಲಬುರ್ಗಿಯಲ್ಲಿ ಡಿಫ್ಕೀರಿಯಾಗೆ (ಗಂಟಲಮಾರಿ) 7 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರ್ಗಿ: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಜ್ವರಗಳ ಸರಣಿ ಆರಂಭವಾಗಿದ್ದು, ಅತ್ತ ಕಲಬುರ್ಗಿಯಲ್ಲಿ ಡಿಫ್ಕೀರಿಯಾಗೆ (ಗಂಟಲಮಾರಿ) 7 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಕಲಬುರ್ಗಿ ಜಿಲ್ಲಾಧಿಕಾರಿ ಎಂಕೆ ಪಾಟೀಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಳೆದ ಸೆಪ್ಟೆಂಬರ್ 2019ರಿಂದ ಈ ವರೆಗೂ ಜಿಲ್ಲೆಯಲ್ಲಿ 134ಕ್ಕೂ ಹೆಚ್ಚು ಡಿಫ್ತೀರಿಯಾ ಪ್ರಕರಣಗಳು ದಾಖಲಾಗಿದೆ. ಈ ಪೈಕಿ 7 ಮಂದಿ ಗಂಭೀರವಾಗಿ ಬಳಿಕ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

'ಕಳೆದ ಸೆಪ್ಚೆಂಬರ್ ನಿಂದ ಜಿಲ್ಲೆಯ ವಿವಿಧ ಆಸ್ಪತ್ರಗೆಳಲ್ಲಿ ಸುಮಾರು 134 ಡಿಫ್ತೀರಿಯಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ  ದಾಖಲಾಗಿರುವವರ ಪೈಕಿ ಹಲವರು ಗಂಭೀರವಾಗಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಈ ಕುರಿತಂತೆ ರಾಜ್ಯ ಸರ್ಕಾರದ ವತಿಯಿಂದ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಎಂಕೆ ಪಾಟೀಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com