ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದ ಮೌಲ್ವಿ ಬಂಧನ

ಮೌಲ್ವಿಯೊಬ್ಬ ಯುವತಿಯನ್ನು ಮನೆಗೆಲಸಕ್ಕೆಂದು ಕರೆತಂದು ಅತ್ಯಾಚಾರ, ದೌರ್ಜನ್ಯ ಎಸಗಿರುವ ಘಟನೆ ನಗರದ ಕೋರಮಂಗಲದ ಮನೆಯೊಂದರಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೌಲ್ವಿಯೊಬ್ಬ ಯುವತಿಯನ್ನು ಮನೆಗೆಲಸಕ್ಕೆಂದು ಕರೆತಂದು ಅತ್ಯಾಚಾರ, ದೌರ್ಜನ್ಯ ಎಸಗಿರುವ ಘಟನೆ ನಗರದ ಕೋರಮಂಗಲದ ಮನೆಯೊಂದರಲ್ಲಿ ನಡೆದಿದೆ.

ರೆಹಬಾರಿಯಾ ಇಸ್ಲಾಮ್ ಫರ್ವೇಜ್ ಎಂಬಾತ ನಾಲ್ಕು ವರ್ಷಗಳ ಹಿಂದೆ ಬಿಹಾರ ಮೂಲದ ಯುವತಿಯೋರ್ವಳನ್ನು ಮನೆಗೆಲಸಕ್ಕೆಂದು ತಂದು ಅತ್ಯಾಚಾರ ಎಸಗಿ ನಂತರ ಐರನ್ ಬಾಕ್ಸ್​​ನಿಂದ ಆಕೆಯ ದೇಹವನ್ನು ಸುಟ್ಟು ವಿಕೃತಿ ಮೆರೆದಿದ್ದಾನೆ ಎಂದು ತಿಳಿದು ಬಂದಿದೆ. ಕೆಲಸಕ್ಕೆಂದು ಯುವತಿಯನ್ನು ಕರೆತಂದು, ಆಕೆಯನ್ನು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿದ್ದಲ್ಲದೇ, ಯುವತಿಯ ಗುಪ್ತಾಂಗಕ್ಕೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ‌ ಎನ್ನಲಾಗಿದೆ.

'ಬಿಹಾರದಿಂದ ಕೆಲಸಕ್ಕೆಂದು 4 ವರ್ಷಗಳ ಹಿಂದೆ ಯುವತಿಯನ್ನು ಕರೆತಂದಿದ್ದ ಫರ್ವೇಜ್ ಪತ್ನಿ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದಾರೆ. ಯುವತಿಯನ್ನು ಕೆಲಸಕ್ಕೆಂದು ಮನೆಗೆ ಕರೆತಂದು ಇಟ್ಟುಕೊಂಡಿದ್ದ ಫರ್ವೇಜ್ ಆಕೆಯನ್ನು ಮನೆಯಿಂದ ಆಚೆ ಹೋಗಲು ಬಿಡುತ್ತಿರಲಿಲ್ಲ. ಪತ್ನಿ ಆಫೀಸಿಗೆ ಹೋದ ನಂತರ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ನಡೆಸುತ್ತಿದ್ದ. ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 ಅಡಿ ಅಕ್ರಮ ಬಂಧನ, 376 ಅಡಿ ಅತ್ಯಾಚಾರ, 307 ಅಡಿ ಕೊಲೆ ಯತ್ನ, 506,507 ಅಡಿ ಬೈಗುಳ, ಜೀವ ಬೆದರಿಕೆ ಆರೋಪದಡಿ ಕೋರಮಂಗಲ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com