ಹೊಸಪೇಟೆ: ಭಾರತೀಯ ಸಂಸ್ಕೃತಿಯಲ್ಲಿ ಗೌರವ, ಪಿಂಡ ಪ್ರಧಾನ ಮಾಡಿದ ದಕ್ಷಿಣ ಆಫ್ರಿಕಾ ಮಹಿಳೆ

ಹಿಂದೂ ದೇವತೆಗಳು ಮತ್ತು ಸಂಸ್ಕೃತಿಯ ಮೇಲೆ ಅಪಾರ ನಂಬಿಕೆ ಗೌರವ ಇರುವ ವಿದೇಶಿ ಮಹಿಯೊಬ್ಬರು ತನ್ನ ತಾಯಿ ತೀರಿ‌ ಎರಡು ವರ್ಷ ಬಳಿಕ ವಿಶ್ವ ವಿಖ್ಯಾತ ಹಂಪಿಗೆ ಇಂದು ಬೇಟಿ ನೀಡಿ ಪಿಂಡ ಪ್ರಧಾನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ತನಗಿರುವ ನಂಬಿಕೆಯನ್ನ ಇಂದು ಅನಾವರಣಗೊಳಿಸಿದ್ದಾಳೆ.
ವಿದೇಶಿ ಮಹಿಳೆಯಿಂದ ಪಿಂಡ ಪ್ರದಾನ
ವಿದೇಶಿ ಮಹಿಳೆಯಿಂದ ಪಿಂಡ ಪ್ರದಾನ

ಹೊಸಪೇಟೆ: ಹಿಂದೂ ದೇವತೆಗಳು ಮತ್ತು ಸಂಸ್ಕೃತಿಯ ಮೇಲೆ ಅಪಾರ ನಂಬಿಕೆ ಗೌರವ ಇರುವ ವಿದೇಶಿ ಮಹಿಯೊಬ್ಬರು ತನ್ನ ತಾಯಿ ತೀರಿ‌ ಎರಡು ವರ್ಷ ಬಳಿಕ ವಿಶ್ವ ವಿಖ್ಯಾತ ಹಂಪಿಗೆ ಇಂದು ಬೇಟಿ ನೀಡಿ ಪಿಂಡ ಪ್ರಧಾನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ತನಗಿರುವ ನಂಬಿಕೆಯನ್ನ ಇಂದು ಅನಾವರಣಗೊಳಿಸಿದ್ದಾಳೆ.

ಹೌದು ದಕ್ಷಿಣ ಆಫ್ರಿಕ ದೇಶದ ಲೀಸಾ ತಾಯಿ ಸಾಲಿಯಾ ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರಂತೆ, ತನ್ನ ತಾಯಿ ಸಾವಿನ ಬಳಿಕ ಭಾರತೀಯ ಸಂಸ್ಕೃತಿಯನ್ನ ಸಾರುವ ಗ್ರಂಥಗಳನ್ನ ಅಧ್ಯಾಯನ ಮಾಡಿದ್ದಾರೆ ಲೀಸಾ. 

ಗ್ರಂಥಗಳಲ್ಲಿ ಉಲ್ಲೇಖ ಗೊಂಡ ವಿಚಾರಗಳನ್ನ ಮನದಲ್ಲಿಟ್ಟುಕೊಂಡು ಸಾವಿನ ನಂತರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಪಿಂಡ ಪ್ರದಾನ ಮಾಡಬೇಕೆಂದು ತಿಳಿದ ಲೀಸಾ, ನಿನ್ನೆ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಹಂಪಿಗೆ‌ ಬೇಟಿ ಇಲ್ಲಿನ ತುಂಗಭದ್ರ ನದಿ ದಡದ ಕರ್ಮ ಮಂಠಪದಲ್ಲಿ ಸ್ಥಳೀಯ ಪುರೋಹಿತ ಮೋಹನ್ ಚಿಕ್ ಭಟ್ ಜೋಶಿಯವರ ಮಾರ್ಗದರ್ಶನದಲ್ಲಿ ಪಿಂಡ ಪ್ರದಾನ ಕಾರ್ಯ ನಡೆಯಿತು.

ಸಹಜವಾಗಿ ಹಂಪಿಗೆ ಬೇಟಿ ನೀಡುವ ವಿದೇಶಿಗರು ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳಿಗೆ ಮನಸೋತು ಇಲ್ಲಿನ ಪದ್ದತಿಹನ್ನ ಅನುಸರಿಸುವುದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದೆ, ಅದರಂತೆ ಕೆಲವು ವಿದೇಶಿಗರು ಹಂಪಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಶ್ವೇಚ್ಚಾಚಾರದಿಂದ ನಡೆದುಕೊಂಡಯ ನಮ್ಮ ಸಂಸ್ಕೃತಿಗೆ ದಕ್ಕೆ ತಂದೆ ಉದಾಹರಣೆಗಳು ಕೂಡ ಇಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com