ಸಾರ್ವಜನಿಕರೇ ಹುಷಾರ್ : ಮಾಲ್, ಶಾಪ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡಬೇಡಿ- ಭಾಸ್ಕರ್ ರಾವ್ ಟ್ವೀಟ್ 

ನಿಮ್ಮ ಮೊಬೈಲ್​ ನಂಬರ್​ಗಳನ್ನು ಮಾಲ್​ ಅಥವಾ ಶಾಪ್​ಗಳಲ್ಲಿ ಶೇರ್ ​  ಮಾಡಬೇಡಿ. ಅವರು ಕೇಳಿದರೂ ನಂಬರ್​ ಕೊಡುವುದಕ್ಕೆ ನಿರಾಕರಿಸಿ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್  ಟ್ವೀಟ್ ಮಾಡಿದ್ದಾರೆ. 
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು : ಟ್ವಿಟ್ಟರ್​ನಲ್ಲಿ  ಸದಾ ಕ್ರಿಯಾಶೀಲವಾಗಿರುವ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಅವರು  ಜನಸ್ನೇಹಿ ಟ್ವೀಟ್​‌ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ಎತ್ತಿದ  ಕೈ. ಈಗ ಆಯುಕ್ತರು, ಸೈಬರ್​ ಕ್ರೈಮ್​ ತಡೆಗಟ್ಟಲು ಜನರು ಏನು ಮಾಡಬೇಕು ಎಂಬುದರ ಕುರಿತು ಸರಳ ಸಂದೇಶವನ್ನು ಹಂಚಿಕೊಂಡಿದ್ದಾರೆ‌. 

ಈ  ಬಗ್ಗೆ ಟ್ವೀಟ್​ ಮಾಡಿರುವ ಭಾಸ್ಕರ್ ರಾವ್ , ಸೈಬರ್​​ ಕ್ರೈಂ ತಡೆಯಲು ಮೊದಲ ಹೆಜ್ಜೆ ,  ನಿಮ್ಮ ಮೊಬೈಲ್​ ನಂಬರ್​ಗಳನ್ನು ಮಾಲ್​ ಅಥವಾ ಶಾಪ್​ಗಳಲ್ಲಿ ಶೇರ್ ​  ಮಾಡಬೇಡಿ. ಅವರು ಕೇಳಿದರೂ ನಂಬರ್​ ಕೊಡುವುದಕ್ಕೆ ನಿರಾಕರಿಸಿ ಎಂದು ಸಲಹೆ ನೀಡಿದ್ದಾರೆ.

ಮೊಬೈಲ್ ನಂಬರ್ ಶೇರ್ ಮಾಡುವುದರಿಂದ  ನಿಮ್ಮ ನಂಬರ್​ ಡೇಟಾ ಆಗಿ ಮಾರಾಟವಾಗುತ್ತದೆ. ಹೀಗಾಗಿ ಸೈಬರ್​​ ವಂಚನೆಗೆ ನೀವೇ ಬಾಗಿಲು  ತೆರೆದಂತೆ ಆಗುತ್ತದೆ. ಆದ್ದರಿಂದ ಮೊಬೈಲ್ ಫೋನ್​ ನಂಬರ್​ ಅನ್ನು ಶೇರ್​  ಮಾಡಬೇಡಿ ಕೊಳ್ಳಬೇಡಿ ಎಂದು ಬರೆದುಕೊಳ್ಳವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com