ಗಾಂಜಾ ಮಾರಾಟ; ಒರಿಸ್ಸಾ ಮೂಲದ ಆರೋಪಿ ಸೆರೆ; 15 ಕೆ.ಜಿ.ಗಾಂಜಾ ವಶ

ಒರಿಸ್ಸಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಮಾರತ್‌ಹಳ್ಳಿ ಪೊಲೀಸರು ಆತನಿಂದ 5 ಲಕ್ಷ ರೂ. ಮೌಲ್ಯದ  15 ಕೆ.ಜಿ. ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

Published: 16th December 2019 01:10 PM  |   Last Updated: 16th December 2019 01:10 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : UNI

ಬೆಂಗಳೂರು: ಒರಿಸ್ಸಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಮಾರತ್‌ಹಳ್ಳಿ ಪೊಲೀಸರು ಆತನಿಂದ 5 ಲಕ್ಷ ರೂ. ಮೌಲ್ಯದ  15 ಕೆ.ಜಿ. ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಒರಿಸ್ಸಾದ ರಾಯಗಡ ಜಿಲ್ಲೆಯ ಬಿಸ್ಸಂಕಟ್ಟಕ್ ಠಾಣಾ ವ್ಯಾಪ್ತಿಯ  ಕೊಡಗುಲಾಮಿ ಗ್ರಾಮದ ನಿವಾಸಿ  ಕಿರದ್ ಮಿಶಾಲ್ (35) ಬಂಧಿತ ಆರೋಪಿ. ಈತ ಒರಿಸ್ಸಾ ರಾಜ್ಯದಿಂದ ರೈಲು ಮೂಲಕ ಬೆಂಗಳೂರಿಗೆ ಅಪರ ಪ್ರಮಾಣದಲ್ಲಿ ಗಾಂಜಾವನ್ನು  ಲಗ್ಗೇಜ್ ಟ್ರಾವೆಲ್ ಬ್ಯಾಗ್‌ನಲ್ಲಿ ತಂದು ಮಾರಾಟ ಮಾಡುತ್ತಿದ್ದ.

ನಗರದ ಐಟಿ ಟೆಕ್‌ಪಾರ್ಕ್‌, ಕಾಲೇಜುಗಳು, ಪಿಜಿಗಳು ಇರುವ ಜನದಟ್ಟಣೆ ಪ್ರದೇಶಗಳಲ್ಲಿ ಸ್ಥಳೀಯ ಗಾಂಜಾ  ಪೆಡ್ಲರ್‌ಗಳಿಗೆ ಈತ ನಿರಂತರ ಗಾಂಜಾವನ್ನು ಮಾರಾಟ ಮಾಡುತ್ತಿದ್ದ. 

ಈತನ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ವಶಕ್ಕೆ ಪಡೆದು ಆತನಿಂದ 5 ಲಕ್ಷ ರೂ. ಮೌಲ್ಯದ 15 ಕೆ.ಜಿ.ಯಷ್ಟು ಅಪಾರ ಪ್ರಮಾಣದ  ನಿಷೇಧಿತ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp