ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಿನ್ನಾಭರಣ ಕಳವು ಮಾಡುತ್ತಿದ್ದ ದಂಪತಿ ಬಂಧನ

ಮಹಿಳೆ ಮತ್ತು ವೃದ್ಧೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ  ಕಳವು ಮಾಡುತ್ತಿದ್ದ  ದಂಪತಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿ,  ಸುಮಾರು 7  ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನಾಭರಣವನ್ನೂ ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರು: ಮಹಿಳೆ ಮತ್ತು ವೃದ್ಧೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ  ಕಳವು ಮಾಡುತ್ತಿದ್ದ  ದಂಪತಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿ,  ಸುಮಾರು 7  ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನಾಭರಣವನ್ನೂ ವಶಪಡಿಸಿಕೊಂಡಿದ್ದಾರೆ. 

ಬಂಧಿತ ದಂಪತಿಯನ್ನು ಮಂಜುಳ ಅಲಿಯಾಸ್ ಕಳ್ಳಿ ಮಂಜಿ ಮತ್ತು ಚೆಲುವರಾಯ ಅಲಿಯಾಸ್ ಚೆಲುವ ಎಂದು ಗುರುತಿಸಲಾಗಿದೆ.

ಈ  ಕಳ್ಳ ದಂಪತಿ ಕಳೆದ ಹಲವು ವರ್ಷಗಳಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ  ಭಾಗಿಯಾಗಿದ್ದು, ಇವರ ವಿರುದ್ಧ ಸುಮಾರು 100ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ  ಎಂಬ ಅಂಶ ಬೆಳಕಿಗೆ ಬಂದಿದೆ. 

ಚಿನ್ನಾಭರಣ  ಅಂಗಡಿಯಿಂದ ಹೊರ ಬರುತ್ತಿದ್ದ ವಯೋವೃದ್ಧೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಅವರು, 100 ರೂಪಾಯಿ ನೋಟು ಬೀಸಾಕಿ  ಅವರ ಗಮನವನ್ನು ಅದರ ಕಡೆಗೆ ಸೆಳೆದು ನಿರ್ಜನ ಪ್ರದೇಶಕ್ಕೆ  ಕೊಂಡ್ಯೂಯ್ದು ಯಾಮಾರಿಸುತ್ತಿದ್ದರು ಎನ್ನಲಾಗಿದೆ. 

ಸುಬ್ರಮಣ್ಯಪುರ  ಎಸಿಪಿ ಮಹಾದೇವ್ ಹಾಗೂ ಇನ್ಸ್​ಪೆಕ್ಟರ್​ ಧರ್ಮೇಂದ್ರ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ  ರಚಿಸಿ, ಕೊನೆಗೂ ಈ ಕಳ್ಳ ದಂಪತಿಯನ್ನು ಪತ್ತೆಹಚ್ಚುವಲ್ಲಿ  ಯಶಸ್ವಿಯಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com