ಮಲ್ಲೇಶ್ವರಂ ವೇಗಾಸ್ ಆಸ್ಪತ್ರೆ ಮಾಲಿಕತ್ವ ವಿವಾದ; ಸಿಸಿಬಿ ನೋಟಿಸ್ 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದ ಮಲ್ಲೇಶ್ವರಂನ ವೇಗಾಸ್ ಆಸ್ಪತ್ರೆ ಈಗ ಮತ್ತೊಮ್ಮೆ ಕಾನೂನು ವ್ಯಾಜ್ಯದಿಂದ ಸುದ್ದಿಯಲ್ಲಿದೆ. 
ಮಲ್ಲೇಶ್ವರಂ ವೇಗಾಸ್ ಆಸ್ಪತ್ರೆ ಮಾಲಿಕತ್ವ ವಿವಾದ; ಸಿಸಿಬಿ ನೋಟಿಸ್
ಮಲ್ಲೇಶ್ವರಂ ವೇಗಾಸ್ ಆಸ್ಪತ್ರೆ ಮಾಲಿಕತ್ವ ವಿವಾದ; ಸಿಸಿಬಿ ನೋಟಿಸ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದ ಮಲ್ಲೇಶ್ವರಂನ ವೇಗಾಸ್ ಆಸ್ಪತ್ರೆ ಈಗ ಮತ್ತೊಮ್ಮೆ ಕಾನೂನು ವ್ಯಾಜ್ಯದಿಂದ ಸುದ್ದಿಯಲ್ಲಿದೆ. 
  
ಆಸ್ಪತ್ರೆಯ ಹಕ್ಕಿಗಾಗಿ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಆಸ್ಪತ್ರೆ ನಿರ್ಮಿಸಿದ್ದ  ರಮೇಶ್ ,ನಾರಾಯಣ ಸ್ವಾಮಿ, ಬಾಲಾಜಿ ಎಂಬ ಪಾಲುದಾರರು ಈಗ ಅದರ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ವೈಮನಸ್ಸಿನ ಕಾರಣ ಒಬ್ಬರು ನೀರು ನಿಲ್ಲಿಸಿದ್ದರೆ ಮತ್ತೊಬ್ಬರು ವಿದ್ಯುತ್ ಸಂಪರ್ಕ ಕಟ್ ಮಾಡುತ್ತಿದ್ದರು.ಅದಕ್ಕಾಗಿ ಟ್ಯಾಂಕರ್ ಮೂಲಕ ನೀರು,ಜನರೇಟರ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು.
  
ಇದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಇಂತಹ ಆಸ್ಪತ್ರೆಯಲ್ಲಿ ಯಾವ ಧೈರ್ಯದ ಮೇಲೆ ಮಾಜಿ ಮುಖ್ಯಮಂತ್ರಿಗಳಿಗೆ ಚಿಕಿತ್ಸೆ ನೀಡಿದಿರಿ ಎಂದು ಪ್ರಶ್ನಿಸಿದೆ. ನಂತರ, ಪ್ರಕರಣವನ್ನು ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com