ಕೆಐಎಬಿ ರಾಡಾರ್'ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು

ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳ ಹಾರಾಟದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಾಡಾರ್ ಗಳ ಮೂಲಕ ಕಣ್ಣಿಡಲು ಭಾರತೀಯ ವಾಯುಪಡೆ ಮುಂದಾಗಿದೆ. 
ಕೆಐಎಬಿ ರಾಡಾರ್'ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು
ಕೆಐಎಬಿ ರಾಡಾರ್'ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು

ಬೆಂಗಳೂರು: ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳ ಹಾರಾಟದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಾಡಾರ್ ಗಳ ಮೂಲಕ ಕಣ್ಣಿಡಲು ಭಾರತೀಯ ವಾಯುಪಡೆ ಮುಂದಾಗಿದೆ. 

ಈ ಕುರಿತಂತೆ ವಾಯುಪಡೆ ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ಇನ್ನು ಮುಂದೆ ಯಲಬಂಕದಲ್ಲಿರು ಭಾರತೀಯ ವಾಯುಪಡೆ ರಾಡಾರ್ ಗಳ ಜೊತೆಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕವೂ ವಾಯುಪಡೆ ವಿಮಾನಗಳ ಸಂಚಾರದ ಮೇಲೆ ನಿಗಾ ಇಡಲಾಗವುದು. 

ಮಿಲಿಟರಿ ಮತ್ತು ನಾಗರೀಕ ವಿಮಾನ ಸೇವೆಯನ್ನು ಹೀಗೆ ಸಂಯೋಜನೆಗೊಳಿಸಿ ಬಳಸುತ್ತಿರುವುದು ದೇಶದಲ್ಲಿಯೇ ಿದೇ ಮೊದಲು. ಯಲಹಂಕ ವಾಯುನೆಲೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಮಗಳು ಪರಸ್ಪರ ಸಮೀಪದಲ್ಲಿಯೇ ಇರುವ ಕಾರಣ, ವಿಮಾನಗಳ ಸಂಚಾರದ ಮೇಲೆ ಅತ್ಯಂತ ಕರಾರುವತ್ತಾಗಿ ನಿಯಂತ್ರಣ ಹೊಂದಿರುವುದು ಅತಗತ್ಯ. ಹೊಸ ಒಪ್ಪಂದದಿಂದಾಗಿ ಎರಡೂ ನಿಲ್ದಾಣಗಳ ಸುಗಮ ಕಾರ್ಯಾಚರಣೆ ಸಾಧ್ಯವಾಗಿದೆ. 

ಯಲಹಂಕ ವಾಯುನೆಲೆಯಲ್ಲಿ ತರಬೇತಿ ವಿಮಾನಗಳು ಹಾರಾಡುತ್ತಿರುವಾಗ, ವಿಮಾನ ನಿಲ್ದಾಣಕ್ಕೆ ನಾಗರೀಕ ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಎರಡಕ್ಕೂ ಪ್ರತ್ಯೇಕ ರಾಡಾರ್ ಇದ್ದರೂ, ಎರಡೂ ರಾಡಾರ್ ಗಳ ನಡುವೆ ಸಂಯೋಜನೆ ಇಲ್ಲದಿರುವುದರಿಂದ ಏಕಕಾಲಕ್ಕೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಎರಡೂ ರಾಡಾರ್ ಗಳನ್ನು ಸಂಯೋಜಿಸುವುದರಿಂದ ಉಭಯ ನಿಲ್ದಾಣಗಳಿಂದ ಹಾರಾಡುವ ಮಾಹಿತಿ ಎರಡೂ ಕಡೆ ಸಿಗಲಿದ್ದು, ಸುಗಮ ಕಾರ್ಯಾಚರಣೆಗೆ ಸಾಧ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com