ಆನ್ ಲೈನ್ ನಲ್ಲಿ ಬನ್ನೇರುಘಟ್ಟ ಮೃಗಾಲಯಕ್ಕೆ ಟಿಕೆಟ್  ಬುಕ್ಕಿಂಗ್ ವ್ಯವಸ್ಥೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲು ಪ್ರವಾಸಿಗರು  ಇನ್ನುಮುಂದೆ ಸರತಿ ಸಾಲಲ್ಲಿ ನಿಲ್ಲುವಂತಿಲ್ಲ,  ಏಕೆಂದರೆ ಆನ್ ಲೈನ್ ನಲ್ಲೂ ಇನ್ನು ಮುಂದೆ ಬುಕ್ ಮಾಡಬಹುದಾಗಿದೆ. ಜೊತೆಗೆ ಸಫಾರಿಗೂ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲು ಪ್ರವಾಸಿಗರು  ಇನ್ನುಮುಂದೆ ಸರತಿ ಸಾಲಲ್ಲಿ ನಿಲ್ಲುವಂತಿಲ್ಲ,  ಏಕೆಂದರೆ ಆನ್ ಲೈನ್ ನಲ್ಲೂ ಇನ್ನು ಮುಂದೆ ಬುಕ್ ಮಾಡಬಹುದಾಗಿದೆ. ಜೊತೆಗೆ ಸಫಾರಿಗೂ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.

ಕಳೆದ ವರ್ಷ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸಫಲವಾಗಲಿಲ್ಲ,  ಪ್ರವಾಸಿಗರಿಂದ ಫೀಡ್ ಬ್ಯಾಕ್ ತೆಗೆದುಕೊಂಡು ಮತ್ತಷ್ಟು ಸುಧಾರಿತ ಕ್ರಮ ಅನುಸರಿಸಲಾಗಿದೆ. ಸದ್ಯಕ್ಕೆ ಶೇ. 50 ರಷ್ಟು ಟಿಕೆಟ್ ಲಭ್ಯವಾಗಲಿದೆ.

 ಕೌಂಟರ್ ನಲ್ಲಿ ಕೂಡ ಜನ  ಟಿಕೆಟ್ ಖರೀದಿಸಬಹುದಾಗಿದೆ, ಇದೊಂದು ಡೈನಾಮಿಕ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಿದೆ. ಸುಮಾರು 30 ಬಸ್ ಗಳಿದ್ದು 5ಸಾವಿರ ಜನರನ್ನು ಸಫಾರಿಗೆ ಕರೆದೊಯ್ಯಬಹುದಾಗಿದೆ. ಆನ್ ಲೈನ್ ನಲ್ಲಿ ಟಿಕೆಟ್  ಬುಕ್ಕಿಂಗ್ ಮಾಡಿದವರಿಗೆ ಹಾಗೂ ಕೌಂಟರ್ ನಲ್ಲಿ ಟಿಕೆಟ್ ಖರಿದಿಸಿವರಿಗೆ ಸಮಾನವಾದ ಆದ್ಯತೆ ನೀಡಲಾಗುವುದು.

ಯಾರೂ ಹೊರಗೆ ಇರದಂತೆ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗುವುದು, ಒಂದು ವೇಳೆ ಟಿಕೆಟ್ ಖಾಲಿಯಾದರೇ ಕೌಂಟರ್ ಕ್ಲೋಸ್ ಮಾಡಲಾಗುತ್ತದೆ. ಆದರೆ  ಈಗ ಆನ್ ಲೈನ್ ನಲ್ಲಿ ಇರುವುದರಿಂದ ಜನರು ರಜಾ ದಿನಗಳಲ್ಲಿ ಬರಲು ಟಿಕೆಟ್ ಬುಕ್ ಮಾಡಬಹುದು ಮತ್ತು ತಮಗೆ ಬೇಕಾದ ದಿನಕ್ಕೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com