ಐಎಂಎ ಬಹುಕೋಟಿ ಹಗರಣ: 2 ಐಪಿಎಸ್ ಅಧಿಕಾರಿ, ಇತರ ನಾಲ್ವರ ವಿಚಾರಣೆ ನಡೆಸಲು ಕರ್ನಾಟಕ ಸರ್ಕಾರಕ್ಕೆ ಸಿಬಿಐ ಮನವಿ!

ಐಎಂಎ ಬಹುಕೋಟಿ ಹಗರಣ ಸಂಬಂಧ ಇಬ್ಬರು ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಅಧಿಕಾರಿಗಳು ಸೇರಿದಂತೆ ಆರು ಕರ್ನಾಟಕ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಸಿಬಿಐ ಅನುಮತಿ ಕೋರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಐಎಂಎ ಬಹುಕೋಟಿ ಹಗರಣ ಸಂಬಂಧ ಇಬ್ಬರು ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಅಧಿಕಾರಿಗಳು ಸೇರಿದಂತೆ ಆರು ಕರ್ನಾಟಕ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಸಿಬಿಐ ಅನುಮತಿ ಕೋರಿದೆ. 

ಇಸ್ಲಾಮಿಕ್ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಆದಾಯ. 1998ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಲ್ಕರ್ ಮತ್ತು 2008ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನು ವಿಚಾರಣೆಗೆ ಒಳಪಡಿಸಿಲು ಕೋರಿ ಸಿಬಿಐ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದೆ. ಇನ್ನು ಈ ಇಬ್ಬರು ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ ಮಾಡಿತ್ತು. 

ಇವರ ಜೊತೆ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸಿಐಡಿ ಇಬಿ ಶ್ರೀಧರ, ಎಸ್‌ಎಚ್‌ಒ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ. ರಮೇಶ್ ಮತ್ತು ಆಗಿನ ಸಹಾಯಕ ಆಯುಕ್ತ ಬೆಂಗಳೂರಿನ ಪಿ. ಗೌರಿಶಂಕರ್ ಮತ್ತು ಉತ್ತರ ಉಪ ವಿಭಾಗದ ಆಯುಕ್ತ ಎಲ್ ಸಿ ನಾಗರಾಜ್ ಅವರನ್ನು ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಸಿಬಿಐ ರಾಜ್ಯದ ಅಧಿಕಾರಿಗಳನ್ನು ಕೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com