ಘಟಪ್ರಭ-ಚಿಕ್ಕೋಡಿ ಜೋಡಿ ಹಳಿ ರೈಲ್ವೆ ಮಾರ್ಗ ಲೋಕಾರ್ಪಣೆ

ನೈರುತ್ಯ ರೈಲ್ವೆಯ ಬೆಳಗಾವಿ ವಿಭಾಗದ ಘಟಪ್ರಭ-ಚಿಕ್ಕೋಡಿ ನಡುವಿನ ನೂತನ ಜೋಡಿ ಹಳಿ ರೈಲ್ವೆ ಮಾರ್ಗವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಬುಧವಾರ ರಾತ್ರಿ ಘಟಪ್ರಭ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.
ಸುರೇಶ್ ಅಂಗಡಿ
ಸುರೇಶ್ ಅಂಗಡಿ

ಬೆಂಗಳೂರು: ನೈರುತ್ಯ ರೈಲ್ವೆಯ ಬೆಳಗಾವಿ ವಿಭಾಗದ ಘಟಪ್ರಭ-ಚಿಕ್ಕೋಡಿ ನಡುವಿನ ನೂತನ ಜೋಡಿ ಹಳಿ ರೈಲ್ವೆ ಮಾರ್ಗವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಬುಧವಾರ ರಾತ್ರಿ ಘಟಪ್ರಭ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದೇಶದ ಆರ್ಥಿಕತೆಗೆ ಭಾರತೀಯ ರೈಲ್ವೆ ಬೆಳವಣಿಗೆಯ ಇಂಜಿನ್ ಆಗಿದೆ. ರೈಲ್ವೆಯಲ್ಲಿ ಮೂಲಸೌಕರ್ಯ ಹೆಚ್ಚಿಸುವುದು, ಮುಖ್ಯವಾಗಿ ಈಗಿರುವ ಹಳಿಯನ್ನು ಜೋಡಿ ಹಳಿ ಮಾರ್ಗವಾಗಿ ಪರಿವರ್ತಿಸುವುದು ಇಲಾಖೆಯ ಆದ್ಯತೆಯಾಗಿದೆ. ರೈಲ್ವೆ ಆಸ್ತಿ ಸಾರ್ವಜನಿಕ ಆಸ್ತಿಯಾಗಿರುವುದರಿಂದ ಇದನ್ನು ರಕ್ಷಿಸುವುದು ಎಲ್ಲ ನಾಗರೀಕರ ಜವಾಬ್ದಾರಿಯಾಗಿದೆ. ರೈಲ್ವೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ಆಯಾ ಪ್ರದೇಶಗಳು ಪ್ರಗತಿಯಾಗುತ್ತಿವೆ ಎಂದರು.

ಇದೇ ವೇಳೆ ಬೆಂಗಳೂರು-ಬೆಳಗಾವಿ ರೈಲನ್ನು ರಾಯಭಾಗದವರೆಗೆ ಶೀಘ್ರವೇ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
                                                         .
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಘಟಪ್ರಭ-ಚಿಕ್ಕೋಡಿ ನಡುವಿನ 16 ಕಿ.ಮೀ ಜೋಡಿ ಹಳಿ ಮಾರ್ಗವು ಲೋಂಡ-ಮೀರಜ್ ವಿಭಾಗದ 186 ಕಿ.ಮೀ ಜೋಡಿ ಹಳಿ ರೈಲು ಮಾರ್ಗದ ಭಾಗವಾಗಿದೆ. ಈ ಯೋಜನೆಯನ್ನು 2015-16ರಲ್ಲಿ 1,191 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಚಿಕ್ಕೋಡಿ-ಕುಡುಚಿ ನಡುವಿನ 31 ಕಿ.ಮೀ ಮಾರ್ಗ ಮಾರ್ಚ್ 2020ರವೇಳೆಗೆ ಪೂರ್ಣಗೊಳ್ಳಲಿದೆ. ಲೋಂಡದಿಂದ ಮೀರಜ್ ನಡುವಿನ ಇಡೀ ಮಾರ್ಗ 2021ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. 

ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com