ಫೈರ್ ಮಾಡಿದ್ರೂ ಒಬ್ಬನೂ ಸಾಯಲಿಲ್ಲ: ಹಿಂಸಾಚಾರದ ವೇಳೆ ಮಂಗಳೂರು ಪೊಲೀಸ್ ಹೇಳಿಕೆ ವಿಡಿಯೋ ವೈರಲ್

ನಿಷೇಧಾಜ್ಞೆ ಉಲ್ಲಂಘಿಸಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದು, ಪೊಲೀಸರ ಗೋಲಿಬಾರ್ ಈಗಾಗಲೇ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಇದರ ನಡುವಲ್ಲೇ ಪೊಲೀಸ್ ಅಧಿಕಾರಿ ಮಾತನಾಡಿದ್ದಾರೆನ್ನಲಾದ ವಿಡಿಯೋವೊಂದು ಭಾರೀ ಸುದ್ದಿಗೆ ಗ್ರಾಸವಾಗಿದೆ. 
ಫೈರ್ ಮಾಡಿದ್ದೂ ಒಬ್ಬನೂ ಸಾಯಲಿಲ್ಲ: ಹಿಂಸಾಚಾರದ ವೇಳೆ ಮಂಗಳೂರು ಪೊಲೀಸ್ ಹೇಳಿಕೆ ವಿಡಿಯೋ ವೈರಲ್
ಫೈರ್ ಮಾಡಿದ್ದೂ ಒಬ್ಬನೂ ಸಾಯಲಿಲ್ಲ: ಹಿಂಸಾಚಾರದ ವೇಳೆ ಮಂಗಳೂರು ಪೊಲೀಸ್ ಹೇಳಿಕೆ ವಿಡಿಯೋ ವೈರಲ್

ಮಂಗಳೂರು: ನಿಷೇಧಾಜ್ಞೆ ಉಲ್ಲಂಘಿಸಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದು, ಪೊಲೀಸರ ಗೋಲಿಬಾರ್ ಈಗಾಗಲೇ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಇದರ ನಡುವಲ್ಲೇ ಪೊಲೀಸ್ ಅಧಿಕಾರಿ ಮಾತನಾಡಿದ್ದಾರೆನ್ನಲಾದ ವಿಡಿಯೋವೊಂದು ಭಾರೀ ಸುದ್ದಿಗೆ ಗ್ರಾಸವಾಗಿದೆ. 

ಫೈರ್ ಮಾಡಿದರೂ, ಒಂದು ಗುಂಡೂ ಕೂಡ ಬೀಳಲಿಲ್ಲ. ಒಬ್ಬರೂ ಸಾಯಲಿಲ್ಲ ಎಂದು ಪೊಲೀಸ್ ಇಲಾಖೆಯ ಸಮವಸ್ತ್ರದಲ್ಲಿರುವ ಪೊಲೀಸ್ ಒಬ್ಬರು ಇತರೆ ಪೊಲೀಸರಿಗೆ ಹೇಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವಿಡಿಯೋ ವೈರಲ್ ಆಗಿದೆ. 

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.  ಈ ವೇಳೆ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡಿ ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. 

ಪ್ರತಿಭಟನೆ ವೇಳೆ ದುಷ್ಕರ್ಮಿಗಳ ಗುಂಪೊಂದು ಬಂದರು ಪೊಲೀಸ್ ಠಾಣಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದು,  ಆ ಬಳಿಕ ನಡೆದ ತೀವ್ರ ಹಿಂಸಾಚಾರದ ವೇಳೆ ಇವರಿಬ್ಬರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಮಾರ್ಗದ ಮಧ್ಯೆ ಕೊನೆಯುಸಿರೆಳೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com