ಐಎಂಎ ಹಗರಣ:  2 ಐಪಿಎಸ್, 4 ರಾಜ್ಯ ಪೋಲೀಸ್ ಅಧಿಕಾರಿಗಳ ವಿಚಾರಣೆಗೆ ಅನುಮತಿಕೋರಿದ ಸಿಬಿಐ

ಬಹು ಕೋಟಿ ಹಣಕಾಸು ವಂಚನೆ ನಡೆಸಿದ ಐ ಮಾನಿಟರಿ ಅಡ್ವೈಸರಿ  (ಐಎಂಎ) ಪೊಂಜಿ ಹಗರಣದಲ್ಲಿ ಭಾಗವಹಿಸಿದ್ದಕ್ಕಾಗಿ  ಇಬ್ಬರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ಮತ್ತು ನಾಲ್ಕು ರಾಜ್ಯ ಕೇಡರ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ತನಿಖಾ ದಳ (ಸಿಬಿಐ) ರಾಜ್ಯ ಸರ್ಕಾರದ ಅನುಮತಿಯನ್ನು ಕೋರಿದೆ 
ಐಎಂಎ ಹಗರಣ:  2 ಐಪಿಎಸ್, 4 ರಾಜ್ಯ ಪೋಲೀಸ್ ಅಧಿಕಾರಿಗಳ ವಿಚಾರಣೆಗೆ ಅನುಮತಿಕೋರಿದ ಸಿಬಿಐ
ಐಎಂಎ ಹಗರಣ: 2 ಐಪಿಎಸ್, 4 ರಾಜ್ಯ ಪೋಲೀಸ್ ಅಧಿಕಾರಿಗಳ ವಿಚಾರಣೆಗೆ ಅನುಮತಿಕೋರಿದ ಸಿಬಿಐ

ಬೆಂಗಳೂರು: ಬಹು ಕೋಟಿ ಹಣಕಾಸು ವಂಚನೆ ನಡೆಸಿದ ಐ ಮಾನಿಟರಿ ಅಡ್ವೈಸರಿ  (ಐಎಂಎ) ಪೊಂಜಿ ಹಗರಣದಲ್ಲಿ ಭಾಗವಹಿಸಿದ್ದಕ್ಕಾಗಿ  ಇಬ್ಬರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ಮತ್ತು ನಾಲ್ಕು ರಾಜ್ಯ ಕೇಡರ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ತನಿಖಾ ದಳ (ಸಿಬಿಐ) ರಾಜ್ಯ ಸರ್ಕಾರದ ಅನುಮತಿಯನ್ನು ಕೋರಿದೆ

ಹೇಮಂತ್ ನಿಂಬಾಳ್ಕರ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್(ಐಜಿಪಿ), ಆಡಳಿತ, ಬೆಂಗಳೂರು ನಗರ ಪೊಲೀಸ್, ಅಜಯ್ ಹಿಲೋರಿ, ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಇಬಿ ಶ್ರೀಧರ, ಡಿಎಸ್‌ಪಿ ಅಪರಾಧ ತನಿಖಾ ಇಲಾಖೆ (ಸಿಐಡಿ), ಎಂ.ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಅನುಮತಿ ಕೋರಿದೆ. ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸ್ಟೇಷನ್ ಹೌಸ್ ಆಫೀಸರ್, ಕಮರ್ಷಿಯಲ್ ಸ್ಟ್ರೀಟ್, ಪಿ ಗೌರಿಶಂಕರ್, ಆಗಿನ ಪೊಲೀಸ್ ಇನ್ಸ್‌ಪೆಕ್ಟರ್. ಕಮರ್ಷಿಯಲ್ ಸ್ಟ್ರೀಟ್ ಮತ್ತು ಬೆಂಗಳೂರು ಉತ್ತರ ಉಪ ವಿಭಾಗದ ಅಂದಿನ ಸಹಾಯಕ ಆಯುಕ್ತ ಎಲ್.ಸಿ.ನಗರಾಜ್.ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ನಂತರ ಅವರುಗಳ ವಿರುದ್ಧ ಸಿಬಿಐ ಪೂರಕ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಯಿದೆ. ಕಳೆದ ತಿಂಗಳು  ಸಿಬಿಐ ಈ ಅಧಿಕಾರಿಗಳ  ಮನೆ ಸೇರಿದಂತೆ ಕರ್ನಾಟಕ ಮತ್ತು ಉತ್ತರ ಪ್ರದೇಶದ 15 ಸ್ಥಳಗಳಲ್ಲಿ ಶೋಧ ನಡೆಸಿದೆ.

ನಿಂಬಾಳ್ಕರ್ ಅವರನ್ನು ಐಜಿಪಿ, ಆರ್ಥಿಕ ಅಪರಾಧಗಳ ವಿಭಾಗ, ಸಿಐಡಿ, ಮತ್ತು ಹಿಲೋರಿ ಅವರನ್ನು ಬೆಂಗಳೂರು ಪೂರ್ವದ ಉಪ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದ್ದ ವೇಳೆ ಐಎಂಎ ಅನಧಿಕೃತ ಚಟುವಟಿಕೆ ಕುರಿತು ಆರ್.ಬಿ.ಐ ಎಚ್ಚರಿಸಿದ್ದರೂ ನಿರ್ಲಕ್ಷ ತೋರಿದ್ದಕ್ಕಾಗಿ ಇವರುಗಳ ಮೇಲೆ ತನಿಖೆ ಕೈಗೊಳ್ಲಲಾಗುತ್ತಿದೆ. ಅಲ್ಲದೆ ಈ ಮೇಲ್ಕಂಡ ಪೋಲೀಸ್ ಅಧಿಕಾರಿಗ:ಉ ಐಎಂಎ ಕಂಪನಿಗೆ ಕ್ಲೀನ್​ಚಿಟ್ ನೀಡಿದ್ದರು. ಇದೀಗ ಸಿಬಿಐ ಸಿಆರ್​ಪಿಸಿ 197 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 170ರ ಅಡಿ ಆರೋಪಿತರ ತನಿಖೆ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ಕೋರಿಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com