ಪೌರತ್ವ ಕಾಯ್ದೆ: ಕೇರಳ ರಾಜ್ಯದಿಂದ ಬಂದ ಸಾವಿರಾರು ಜನರಿಂದ ಮಂಗಳೂರಿನಲ್ಲಿ ಹಿಂಸೆ

ಮಂಗಳೂರಿನಲ್ಲಿ ಕೇರಳದಿಂದ ಬಂದಿರುವ ಸಾವಿರಾರು ಜನರಿಂದ ಹಿಂಸಾಚಾರ, ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
ಮಂಗಳೂರು ಹಿಂಸಾಚಾರ
ಮಂಗಳೂರು ಹಿಂಸಾಚಾರ

ಬೆಂಗಳೂರು: ಮಂಗಳೂರಿನಲ್ಲಿ ಕೇರಳದಿಂದ ಬಂದಿರುವ ಸಾವಿರಾರು ಜನರಿಂದ ಹಿಂಸಾಚಾರ, ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಎರಡು ಮೂರು ದಿನಗಳಿಂದ ಮಂಗಳೂರಿನಲ್ಲಿ ಈ ವ್ಯಕ್ತಿಗಳು ಜಮಾವಣೆ ಆಗಿದ್ದರು. ಮಂಗಳೂರು ಉತ್ತರದಲ್ಲಿ ಪ್ರತಿಭಟಕಾರರು ಪೊಲೀಸ್ ಠಾಣೆ ಸುಡುವ ಪ್ರಯತ್ನ ನಡೆಸಿದಾಗ ಅವರ ಮೇಲೆ ಬಲ ಪ್ರಯೋಗ ಮಾಡಿದ್ದು, ಮಂಗಳೂರಿನ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಹಿಂಸಾಚಾರ ತಡೆಯುವುದು ನಮ್ಮ ಮೊದಲ ಪ್ರಾಶಸ್ತ್ಯ. ಆ ಬಳಿಕ ಹಿಂಸೆಯ ಹಿಂದಿರುವ ವ್ಯಕ್ತಿಗಳ ಮೇಲೆ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು. 

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗಾಳಿ ಸುದ್ದಿ ಹರಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎರಡು ದಿನ ಇಂಟರ್ನೆಟ್ ಬಂದ್ ಮಾಡಲು ಗೃಹಸಚಿವಾಲಯ ನಿರ್ಧರಿಸಿದೆ. 

ಅದರಂತೆ ಗುರುವಾರ ರಾತ್ರಿ 10 ಗಂಟೆಯಿದ 48 ಗಂಟೆ ಕಾಲ ಮೊಬೈಲ್ ಇಂಟರ್ನೆಟ್ ಬ್ಲಾಕ್ ಮಾಡಲಾಗಿದೆ. ಈ ಸಂಬಂಧ ರಾಜ್ಯ ಗೃಹ ಖಾತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೊಯಲ್ ಅವರುಆದೇಶ ಹೊರಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com