ಸಿಎಎ ವಿರುದ್ಧ ಪ್ರತಿಭಟನೆ: ಕೇರಳ ಸಂಸದ ಮಂಗಳೂರು ಪೋಲೀಸ್ ವಶಕ್ಕೆ

ಕೇರಳದ ಸಿಪಿಐ ರಾಜ್ಯಸಭಾ ಸಂಸದ ಬಿನೊಯ್ ವಿಶ್ವಂ ಸೇರಿ ಪಕ್ಷದ ಕಾರ್ಯಕರ್ತರನ್ನು ಕರ್ಫ್ಯೂ ಧಿಕ್ಕರಿಸಿ ಸಿಎಎ ವಿರುದ್ಧ ಇಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಂಗಳೂರು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಬಿನೊಯ್ ವಿಶ್ವಂ
ಬಿನೊಯ್ ವಿಶ್ವಂ

ಮಂಗಳೂರು: ಕೇರಳದ ಸಿಪಿಐ ರಾಜ್ಯಸಭಾ ಸಂಸದ ಬಿನೊಯ್ ವಿಶ್ವಂ ಸೇರಿ ಪಕ್ಷದ ಕಾರ್ಯಕರ್ತರನ್ನು ಕರ್ಫ್ಯೂ ಧಿಕ್ಕರಿಸಿ ಸಿಎಎ ವಿರುದ್ಧ ಇಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಂಗಳೂರು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನಾಕಾರರು 'ಸೇವ್ ಇಂಡಿಯಾ, ಸೇವ್ ಡೆಮಾಕ್ರಸಿ' ಘೋಷಣೆಗಳನ್ನು ಕೂಗುತ್ತಿದ್ದರು. ಅಲ್ಲದೆ ಹೊಸ ಕಾನೂನಿನ ವಿರುದ್ಧ ಪ್ರತಿಭಟಿಸುವವರ ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಂಡ ಹಠಮಾರಿ ಕ್ರಮಗಳನ್ನು ಖಂಡಿಸಿದ್ದಾರೆ.

ಬಿನೊಯ್ ವಿಶ್ವಂ ಸೇರಿದಂತೆ ಆರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರವೇಶಕ್ಕೆ ಪೋಲೀಸರು ನಿರ್ಬಂಧಿಸಿದ್ದಾರೆ. ಮಂಗಳೂರು ನಗರದಲ್ಲಿ  ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು ಸಿದ್ದರಾಮಯ್ಯ ಆಘಾತ್ಗೊಂಡಿದ್ದಾರೆ. ನಗರದಲ್ಲಿ  ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಭಾನುವಾರ ಮಧ್ಯರಾತ್ರಿಯವರೆಗೆ ಸಿದ್ದರಾಮಯ್ಯ ನಗರ ವ್ಯಾಪ್ತಿ ಪ್ರವೇಶಿಸುವುದನ್ನು ತಡೆಯುವ ಬಗ್ಗೆ ನಗರ ಪೊಲೀಸ್ ಆಯುಕ್ತ ಪಿ ಎಸ್ ಹರ್ಷ ನೋಟಿಸ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಗೋವಾ ವಿಮಾನ ನಿಲ್ದಾಣಗಳಿಂದ ಸಿದ್ದರಾಮಯ್ಯ ನಗರಕ್ಕೆ ಬರುವುದನ್ನು ನಿಷೇಧಿಸಿ ನೋಟೀಸ್ ಜಾರಿಯಾಗಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com