13ರ ಬಾಲಕನ ಮೇಲೆ ಡೆಸ್ಟರ್ ನಿಂದ ಹಲ್ಲೆ, ಶಾಲಾ ಪ್ರಾಂಶುಪಾಲ, ಶಿಕ್ಷಕರ ಬಂಧನ

 7 ನೇ ತರಗತಿಯ 13 ವರ್ಷದ ಬಾಲಕನನ್ನು ಮರದ ಡೆಸ್ಟರ್ ನಿಂದ ಹೊಡೆದು ತಲೆಗೆ ಗಾಯ ಮಾಡಿದ್ದಲ್ಲದೆ ಬಾಲಕನ ತಂಗಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರು ನಗರದ ಕೋರಮಂಗಲದಲ್ಲಿರುವ ನಾರಾಯಣ ಇ-ಟೆಕ್ನೋ ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಪೋಲೀಸರು ಬಂಧಿಸಿದ್ದಾರೆ. ಕೋರಮಂಗಲ 8 ನೇ ಬ್ಲಾಕ್ನಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ.’
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 7 ನೇ ತರಗತಿಯ 13 ವರ್ಷದ ಬಾಲಕನನ್ನು ಮರದ ಡೆಸ್ಟರ್ ನಿಂದ ಹೊಡೆದು ತಲೆಗೆ ಗಾಯ ಮಾಡಿದ್ದಲ್ಲದೆ ಬಾಲಕನ ತಂಗಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರು ನಗರದ ಕೋರಮಂಗಲದಲ್ಲಿರುವ ನಾರಾಯಣ ಇ-ಟೆಕ್ನೋ ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಪೋಲೀಸರು ಬಂಧಿಸಿದ್ದಾರೆ. ಕೋರಮಂಗಲ 8 ನೇ ಬ್ಲಾಕ್ನಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ.’

ಶಾಲೆಯ ಗಣಿತ ಶಿಕ್ಷಕಿ  ರೇಷ್ಮಾ, ಈ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು ಶಾಲಾ ಪ್ರಾಂಶುಪಾಲರಾದ ; ಶಾಜಿ ಸೆಬಾಸ್ಟಿಯನ್ರು; ಮತ್ತು ಇಂಗ್ಲಿಷ್ ಶಿಕ್ಷಕ ಮ್ಯಾಥ್ಯೂ.ಅವರುಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇತ್ತ ಡಿಸೆಂಬರ್ 16 ರಂದು ನಡೆದ ಈ ಘಟನೆಯನ್ನು ಶಾಲಾ ಆಡಳಿತ ಮಂಡಳಿ ಮುಚ್ಚಿ ಹಾಕಲು ಯತ್ನಿಸುತ್ತಿದೆ.

ರೇಷ್ಮಾ ಬಾಲಕನ ಹಣೆಯ ಮೇಲೆ ಡೆಸ್ಟರ್ ಎಸೆದಿದ್ದು ಆತನಿಗೆ ಗಾಯಗಳಾಗಿ ಹೊಲಿಗೆ ಹಾಕಲಾಗಿದೆ. ಇಷ್ಟಕ್ಕೂ ಆ ಬಾಲಕ ಮಾಡಿದ್ದಾದರೂ ಏನೆಂದರೆ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುತ್ತಿರುವಾಗ ಝೊರಗಿನಿಂದ ಹಾಡು ಕೇಳುತ್ತಿತ್ತು. ಆಗ ಬಾಲಕ ಹಾಡನ್ನು ಕೇಳಲು ಕಿಟಕಿ ತೆರೆಯಲೆಂದು ಬಯಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶಿಕ್ಷಕಿ ಬಾಲಕನ ಹಣೆಗೆ ಡೆಸ್ಟರ್ ನಿಂದ ಹೊಡೆದಿದ್ದಾಳೆ. ಆ ನಂತರ ಶಾಲಾ ಆಡಳಿತ ಮಂಡಳಿ ಬಾಲಕನ  ತಾಯಿಯನ್ನು ಶಾಲೆಗೆ ಕರೆದಿದ್ದು ಆತ ಆಟವಾಡುವಾಗ ದ್ದು ಗಾಯಗೊಂಡಿದ್ದಾಗಿ ಸುಳ್ಳು ಕಥೆ ಹೇಳಿದೆ.

ಬಾಲಕನ ತಾಯಿ ಪವಿತ್ರಾ ಬುಧವಾರ ಕೋರಮಂಗಲ ಪೊಲೀಸರನ್ನು ಸಂಪರ್ಕಿಸಿ, ಡಿಸೆಂಬರ್ 16 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಬಾಲಕ ಬಿದ್ದು ಗಾಯಗೊಂಡಿದ್ದಾಗಿ ವಿವರಿಸಿದ್ದಾರೆ. ಬಾಲಕನ ತಾಯಿ ಶಾಲೆಗೆ ಹೀಗಿದ್ದಾಗ ಮಗು ಪ್ರಾಂಶುಪಾಲರ ಕಚೇರಿಯಲ್ಲಿ ಕುಳಿತು ಅಳುತ್ತಿದ್ದ. ಆಗ ಪ್ರಾಂಶುಪಾಲರು ಸಹ ಬಾಲಕ ಬಿದ್ದು ಗಾಯ ಮಾಡಿಕೊಂಡನೆಂದೇ ಹೇಳಿದ್ದರು. ಆದರೆ ಬಾಲಕನನ್ನು ಸಮಾಧಾನಪಡಿಸಿದ ಪವಿತ್ರಾ "ಏನಾಗಿದೆ" ಎಂದು ವಿಚಾರಿಸಿದಾಗ ಬಾಲಕ ರೇಷ್ಮಾ ಬಗೆಗೆ ಬಾಯಿಬಿಟ್ಟಿದ್ದಾನೆ. ಆಗ ಪವಿತ್ರಾ ಪ್ರಾಂಶುಪಾಲರ ಬಳಿ ಸಾರಿ ಏಕೆ ಸುಳ್ಳು ಹೇಳುವಿರಿ ಎಂದು ಕೇಳಿದ್ದಾರೆ. ಆಗ  ಸೆಬಾಸ್ಟಿಯನ್ ಸಮಸ್ಯೆಯನ್ನು ದೊಡ್ಡದಾಗಿಸಬಾರದೆಂದು ಆಕೆಯ ಮನವೊಲಿಸಲು ಮುಂದಾಗಿದ್ದಾರೆ.ಈ ವಿಷಯವನ್ನು ಯಾರಿಗೂ ಬಹಿರಂಗಪಡಿಸದಂತೆ ಶಾಲಾ ಆಡಳಿತ ಮಂಡಳಿಯು ಮನವೊಲಿಸಲು ಪ್ರಯತ್ನಿಸಿದೆ ಮತ್ತು ಶಾಲೆಯ ಶುಲ್ಕವನ್ನು ಸಹ ಮನ್ನಾ ಮಾಡಲು ಮುಂದಾಗಿದೆ ಎಂದು ಪವಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಆಡಳಿತ ಮಂಡಳಿ ಪವಿತ್ರಾ ನೆರೆಹೊರೆಯವರ ಮೂಲಕವೂ ಆಕೆಯ ಮನವೊಲಿಕೆಗೆ ಪ್ರಯತ್ನಿಸಿದೆ.

ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಮಗಳಿಗೆ ಮ್ಯಾಥ್ಯೂ ಬೆದರಿಕೆ ಹಾಕಿದ್ದಾನೆ ಎಂದು  ಪವಿತ್ರಾ ಆರೋಪಿಸಿದ್ದು, ಶಾಲೆಯು ತನ್ನನ್ನು ಬೆದರಿಸುತ್ತಿದೆ. ಕುಟುಂಬವು ಪೊಲೀಸರನ್ನು ಅಥವಾ ಯಾವುದೇ ಮಕ್ಕಳ ಸಹಾಯವಾಣಿಯನ್ನು ಸಂಪರ್ಕಿಸಿದರೆ ಬಾಲಕಿಯನ್ನು ಶಾಲೆಯಿಂದ ಅಮಾನತು ಮಾಡುವುದಾಗಿ ಮತ್ತು ಆ ಮೂಲಕ ಆಕೆಯ ಭವಿಷ್ಯ ಹಾಳು ಮಾಡುವುದಾಗಿ ತಮಗೆ ಬೆದರಿಕೆ ಇದೆ ಎಂದು ಪವಿತ್ರಾ ಹೇಳಿದ್ದಾರೆ.

ಪತ್ರಿಕೆಯು ಈ ಸಂಬಂಧ ಪ್ರಶ್ನಿಸಿದಾಗ ಶಾಲಾ ಆಡಳಿತ ಯಾವೊಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.ಕೋರಮಂಗಲ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com