ಮುಸ್ಲಿಂ ಸಂಘಟನೆಗಳಿಂದ ಮಂಗಳೂರಿನಲ್ಲಿ ರ್ಯಾಲಿಗೆ ಕರೆ; ಹಿರಿಯ ಪೊಲೀಸ್ ಅಧಿಕಾರಿಗಳ ರಾಜೀನಾಮೆಗೆ ಒತ್ತಾಯ 

ಡಿಸೆಂಬರ್ 28ರಂದು ಮಂಗಳೂರಿನಲ್ಲಿ ರ್ಯಾಲಿ ಆಯೋಜಿಸಲು ಅನುಮತಿ ನೀಡಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಮುಸ್ಲಿಂ ಕೇಂದ್ರ ಸಮಿತಿ ಕೋರಿದೆ.
ಮುಸ್ಲಿಂ ಸಂಘಟನೆಗಳಿಂದ ಮಂಗಳೂರಿನಲ್ಲಿ ರ್ಯಾಲಿಗೆ ಕರೆ; ಹಿರಿಯ ಪೊಲೀಸ್ ಅಧಿಕಾರಿಗಳ ರಾಜೀನಾಮೆಗೆ ಒತ್ತಾಯ 

ಮಂಗಳೂರು: ಡಿಸೆಂಬರ್ 28ರಂದು ಮಂಗಳೂರಿನಲ್ಲಿ ರ್ಯಾಲಿ ಆಯೋಜಿಸಲು ಅನುಮತಿ ನೀಡಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಮುಸ್ಲಿಂ ಕೇಂದ್ರ ಸಮಿತಿ ಕೋರಿದೆ.


ಮಂಗಳೂರಿನ ನೆಹರೂ ಮೈದಾನದಲ್ಲಿ ರ್ಯಾಲಿ ಆಯೋಜಿಸಲು ನಿರ್ಧರಿಸಿದ್ದು, ಇದಕ್ಕೆ ಪೊಲೀಸರ ಅನುಮತಿ ಬೇಕೆಂದು ಕೋರಿದ್ದಾರೆ.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಕೆ ಎಸ್ ಮೊಹಮ್ಮದ್ ಮಸೂದ್, ಪೊಲೀಸ್ ಗುಂಡೇಟಿಗೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಶಿಕ್ಷೆ ನೀಡಬೇಕೆಂದು ಸಮಿತಿ ಒತ್ತಾಯಿಸುತ್ತಿದೆ. ಮಂಗಳೂರು ಪೊಲೀಸ್ ಆಯುಕ್ತರನ್ನು ಮತ್ತು ಮಂಗಳೂರು ಇನ್ಸ್ ಪೆಕ್ಟರ್ ನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಹೇಳಿದರು.


ಪೊಲೀಸರು ನಮ್ಮನ್ನು ಶತ್ರುಗಳಂತೆ ಕಾಣುವುದನ್ನು ನಿಲ್ಲಿಸಬೇಕು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಮಾಡುವುದಕ್ಕೆ ನಮಗೆ ಎಲ್ಲಾ ರೀತಿಯ ಹಕ್ಕು ಇದೆ. ಪೊಲೀಸರಿಂದ ನಮಗೆ ಬೆಂಬಲ ಬೇಕು. ರ್ಯಾಲಿಗೆ ಅನುಮತಿ ಕೊಡದಿದ್ದರೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.


ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿರುವ ಮೊಹಮ್ಮದ್ ಮಸೂದ್ ನಿವಾಸಕ್ಕೆ ಕರೆ ಮಾಡಿ ನ್ಯಾಯಕ್ಕಾಗಿ ಹೋರಾಟ ನಡೆಸಲು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com