ಸಿಐಡಿ ತನಿಖೆಗೆ ಸಹಮತವಿಲ್ಲ, ನ್ಯಾಯಾಂಗ ತನಿಖೆಯಾಗಬೇಕು: ಸಿದ್ದರಾಮಯ್ಯ
ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿರುವುದಕ್ಕೆ ನನಗೆ ಒಪ್ಪಿಗೆಯಿಲ್ಲ, ಮಂಗಳೂರು ಘಟನೆ ಕುರಿತು ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮ್ಯ ಆಗ್ರಹಿಸಿದ್ದಾರೆ.
Published: 23rd December 2019 02:13 PM | Last Updated: 23rd December 2019 02:13 PM | A+A A-

ಸಿದ್ದರಾಮಯ್ಯ
ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿರುವುದಕ್ಕೆ ನನಗೆ ಒಪ್ಪಿಗೆಯಿಲ್ಲ, ಮಂಗಳೂರು ಘಟನೆ ಕುರಿತು ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮ್ಯ ಆಗ್ರಹಿಸಿದ್ದಾರೆ.
ಕರ್ಫ್ಯೂ ತೆರವಾದ ಬಳಿಕ ಇಂದು ಮಂಗಳೂರಿಗೆ ಭೇಟಿ ನೀಡಿದ ಅವರು, ಗೋಲಿಬಾರ್ನಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದರು.
ಇದೇ ವೇಳೆ ಘಟನೆಯನ್ನು ಸಿಐಡಿಗೆ ಒಪ್ಪಿಸುವ ನಿರ್ಧಾರ ಸರಿಯಲ್ಲ. ಕಾರಣ ಸಿಐಡಿ ಇರುವುದು ರಾಜ್ಯ ಪೊಲೀಸರ ಕೈಯಲ್ಲಿ. ಗೋಲಿಬಾರ್ ನಡೆದಿದ್ದು ಕೂಡ ಪೊಲೀಸರಿಂದ. ಹೀಗಾಗಿ ಈ ತನಿಖೆಗೆ ನಮ್ಮ ವಿರೋಧವಿದೆ ಎಂದರು.
ಘಟನೆಯನ್ನು ಹೈ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ನ್ಯಾಯಾಂಗ ತನಿಖೆಯಿಂದ ಮಾತ್ರ ನ್ಯಾಯ ದೊರಕಲು ಸಾಧ್ಯ. ಸಿಎಂ ಸದಾ ಸುಳ್ಳು ಹೇಳುವವರು. ಅವರು ಘಟನೆಯ ಪ್ರತ್ಯಕ್ಷ ದರ್ಶಿಯಲ್ಲ. ಹಾಗಾಗಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.