ಪೌರತ್ವ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆ: 2 ಲಕ್ಷ ಜನತೆ ಭಾಗಿ

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರೀಕ ನೋಂದಣಿ ವಿರೋಧಿಸಿ ಸೋಮವಾರ ರಾಜಧಾನಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. 
ಪೌರತ್ವ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆ: 2 ಲಕ್ಷ ಜನತೆ ಭಾಗಿ
ಪೌರತ್ವ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆ: 2 ಲಕ್ಷ ಜನತೆ ಭಾಗಿ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರೀಕ ನೋಂದಣಿ ವಿರೋಧಿಸಿ ಸೋಮವಾರ ರಾಜಧಾನಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. 

ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಸಮೀಪದ ಖುದ್ದೂಸ್ ಈದ್ಗಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಭಾರತ ಮಾತಾಕಿ ಜೇ, ಹಿಂದೂಸ್ತಾನ್ ಜಿಂದಾಬಾದ್, ಸಂವಿಧಾನ ಜಿಂದಾಬಾದ್, ಅಂಬೇಡ್ತರ್ ಜಿಂದಾಬಾದ್ ಘೋಷಣೆಗಳು ಮುಗಿಲು ಮುಟ್ಟಿತ್ತು. 

ಸಮಾವೇಶ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ವಿವಿಧ ಪ್ರದೇಶಗಳಿಂದ ಮುಸ್ಲಿಂ ಸಮುದಾಯದವರು ತಂಡೋಪತಂಡವಾಗಿ ಆಗಮಿಸಿದ್ದರು. ತಾವು ಬರುವ ಮಾರ್ಗದುದ್ದಕ್ಕೂ ಸಿಎಎ ಹಾಗೂ ಎನ್ಆರ್'ಸಿಗೆ ಧಿಕ್ಕಾರ ಕೂಗಿದರು. ಜೊತೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೈ ಹಾಗೂ ಹಣೆಗೆ ಕಪ್ಪುಪಟ್ಟಿ ಧರಿಸಿದ್ದ ಯುವಕರು ಎನ್ಆರ್'ಸಿ, ಸಿಎಎ ವಿರುದ್ಧದ ಬರಹವಿದ್ದ ಭಿತ್ತಿಫಲಕಗಳನ್ನು ಪ್ರದರ್ಶಿಸಿದರು. 

ಬೆಳಿಗ್ಗೆ 10.30ರ ವೇಳೆಗೆ ಇಡೀ ಈದ್ಗಾ ಮೈದಾನ ಹೋರಾಟಗಾರರಿಂದ ಭರ್ತಿಯಾಗಿತ್ತು. ನಂತರ ಕೆಲ ಕಾಲ ಪೊಲೀಸರು ಮೈದಾನ ಪ್ರವೇಶ ದ್ವಾರ ಬಂದ್ ಮಾಡಿ, ಪ್ರವೇಶ ನಿರ್ಬಂಧಿಸಿದ್ದರು. ಹೀಗಾಗಿ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಹೋರಾಟಗಾರರು ಜಮಾಯಿಸಿದ್ದರು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೂ ಿಡೀ ಮೈದಾನ ಹಾಗೂ ಸುತ್ತಮುತ್ತಲ ರಸ್ತೆಗಳು ಎನ್ಆರ್'ಸಿ ಹಾಗೂ ಸಿಎಎ ವಿರೋಧಿ ಹೋರಾಟಗಾರರಿಂದ ಭರ್ತಿಯಾಗಿದ್ದವು. ಸಮಾವೇಶದಲ್ಲಿ ಮುಸ್ಲಿಂ ಮಹಿಳೆಯರೂ ಕೂಡ ಭಾಗಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com