ಧಾರವಾಡ ವೈದ್ಯೆಗೆ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಪ್ರಶಸ್ತಿ

ಮಯನ್ಮಾರ್ ನಲ್ಲಿ ನಡೆದ ಕ್ಲಾಸಿಕ್ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಸ್ಪರ್ಧಯಲ್ಲಿ ಧಾರವಾಡ ಮೂಲದ ವೈದ್ಯೆಯೊಬ್ಬರು ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಧಾರವಾಡ ವೈದ್ಯೆಗೆ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಪ್ರಶಸ್ತಿ (ಚಿತ್ರ: ಪಬ್ಲಿಕ್ ಟಿವಿ ಕೃಪೆ)
ಧಾರವಾಡ ವೈದ್ಯೆಗೆ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಪ್ರಶಸ್ತಿ (ಚಿತ್ರ: ಪಬ್ಲಿಕ್ ಟಿವಿ ಕೃಪೆ)

ನಾಯ್ಪಿಟಾವ್(ಮಯನ್ಮಾರ್): ಮಯನ್ಮಾರ್ ನಲ್ಲಿ ನಡೆದ ಕ್ಲಾಸಿಕ್ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಸ್ಪರ್ಧಯಲ್ಲಿ ಧಾರವಾಡ ಮೂಲದ ವೈದ್ಯೆಯೊಬ್ಬರು ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಧಾರವಾಡದ ಎಸ್‍ಡಿಎಂ ಮೆಡಿಕಲ್ ಕಾಲೇಜಿನ ಪ್ರಾದ್ಯಾಪಕಿ, ವೈದ್ಯೆ ಡಾ.ಶಿಲ್ಪಾ ಹಕ್ಕಿ ಈ ಸಾಧನೆ ಮಾಡಿದ್ದಾರೆ. ಮಯನ್ಮಾರ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ  ಜಪಾನ್ ಮತ್ತು ಥೈಲಾಂಡ್ ದೇಶದ ಸ್ಪರ್ಧಿಗಳ ಹಿಂದಿಕ್ಕಿದ ಡಾ. ಶಿಲ್ಪಾ ಜಯದ ಮಾಲೆಗೆ ಕೊರಳೊಡ್ಡಿದ್ದಾರೆ. ಇದರೊಡನೆ ಅವರು  ಟ್ಯಾಲೆಂಟ್ ಕ್ವೀನ್ ಎಂಬ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.

ಶಿಲ್ಪಾ ಈ ಸ್ಪರ್ಧೆಯಲ್ಲಿ ಅಷ್ಟಭುಜದ ದೇವಿಯಾಗಿ ರ್ಯಾಂಪ್ ವಾಕ್ ಮಾಡಿದ್ದಲ್ಲದೆ ಯಕ್ಷಗಾನ, ಭರತನಾಟ್ಯದ ಪೋಷಾಕ್ ಧರಿಸಿ ತಮ್ಮ ಸಂಸ್ಕೃತಿಯನ್ನು ಬಿಂಬಿಸಿದ್ದರು. 

ಇದಕ್ಕೆ ಮುನ್ನ ಶಿಲ್ಪಾ ಅವರು ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗದಲ್ಲಿ ವಿಜೇತರಾಗಿದ್ದು ರಾಷ್ಟ್ರೀಯ ವಿಭಾಗದಲ್ಲಿ ಡ್ಯಾನ್ಸಿಂಗ್ ಕ್ವೀನ್ ಎಂಬ ಗೌರವಕ್ಕೆ ಭಾಜನರಾಗಿದ್ದರು. ಈ ಮೂಲಕ ಅವರು ಏಷ್ಯಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆಇದ್ದು ಇದೀಗ ಭಾರತ ಹಾಗೂ ಕರ್ನಾಟಕಕ್ಕೆ ವಿಶೇಷ ಕೀರ್ತಿಯನ್ನು ತಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com