ದಾವಣಗೆರೆ: ಲಾರಿಗಳ ಢಿಕ್ಕಿ, ಮೂವರು ಸಜೀವ ದಹನ

ಡೀಸೆಲ್ ಟ್ಯಾಂಕರ್ ಹಾಗೂ ಕಂಟೈನರ್ ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆ ಜಗಳೂರಿನ ದೋಣಿಹಳ್ಳಿ ಸಮೀಪ ನಡೆದಿದೆ.

Published: 26th December 2019 04:12 PM  |   Last Updated: 26th December 2019 04:12 PM   |  A+A-


ದಾವಣಗೆರೆ: ಲಾರಿಗಳ ಢಿಕ್ಕಿ, ಮೂವರು ಸಜೀವ ದಹನ

Posted By : Raghavendra Adiga
Source : Online Desk

ದಾವಣಗೆರೆ: ಡೀಸೆಲ್ ಟ್ಯಾಂಕರ್ ಹಾಗೂ ಕಂಟೈನರ್ ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆ ಜಗಳೂರಿನ ದೋಣಿಹಳ್ಳಿ ಸಮೀಪ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಈ ಘಟನೆ ನಡೆದಿದ್ದು, ಹರಿಯಾಣ ರಾಜ್ಯಕ್ಕೆ ಸೇರಿದ ಗ್ಯಾಸ್ ಟ್ಯಾಂಕರ್ ಹಾಗೂ ಟಯರ್ ಗಳ ತುಂಬಿದ್ದ ಲಾರಿ ಪರಸ್ಪರ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಎರಡೂ ಲಾರಿಗಳಲ್ಲಿದ್ದ ಮೂವರು ಸಜೀವ ದಹನವಾಗಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. 

ಅಪಘಾತವಾದ ಹಿನ್ನೆಲೆ ಕೆಲ ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಾಂಚಾರ ಸಂಪೂರ್ನ ಸ್ಥಗಿತವಾಗಿತ್ತು. ಸ್ಥಳಕ್ಕೆ ದಾವಣಗೆರೆ, ಚಿತ್ರದುರ್ಗದ ಎಂಟು ಅಗ್ನಿಶಾಮಕ ದಳ ವಾಹನಗಳು ಆಗಮಿಸಿ ಬೆಂಕಿ ನಂದಿಸಿದ್ದವು. 

ಘಟನೆ ಕುರಿತಂತೆ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp