ನಿರಾಶ್ರಿತರಿಗೆ ನಿಧಿಯ ಬರ, ಪ್ರವಾಹ ನಿಂತರೂ ಸಮಸ್ಯೆಗಳ ಪ್ರವಾಹ ನಿಂತಿಲ್ಲ!

ಹಿಂದೆಂದೂ ಕಾಣದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕರ್ನಾಟಕ, ಐದು ತಿಂಗಳ ಬಳಿಕವೂ ಪ್ರವಾಹದಿಂದಾದ ಸಮಸ್ಯೆಗಳಿಂದ ಇನ್ನೂ ಹೊರಬಂದಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಿಂದೆಂದೂ ಕಾಣದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕರ್ನಾಟಕ, ಐದು ತಿಂಗಳ ಬಳಿಕವೂ ಪ್ರವಾಹದಿಂದಾದ ಸಮಸ್ಯೆಗಳಿಂದ ಇನ್ನೂ ಹೊರಬಂದಿಲ್ಲ.

ಹೌದು.. ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕರ್ನಾಟಕದಲ್ಲಿ ಸರ್ಕಾರ ಕೈಗೊಂಡ ನಿರಾಶ್ರಿತರ ಕುರಿತ ಯೋಜನೆಗಳು, ಪರಿಹಾರ ಮತ್ತು ಪುನರ್ವಸತಿ ಯೋಜನೆಗಳು ನಿಧಿಯ ಕೊರತೆಯಿಂದಾಗಿ ಹಳ್ಳ ಹಿಡಿದಿವೆ. ಪ್ರವಾಹದಿಂದಾಗಿ ರಾಜ್ಯ ಸರ್ಕಾರಕ್ಕೆ ಸುಮಾರು 35 ಸಾವಿರ ಕೋಟಿ ರೂ ನಷ್ಟ ಸಂಭವಿಸಿದೆ. 

ಆ ಪೈಕಿ 'ಕರ್ನಾಟಕ ಸರ್ಕಾರ 6,057.56 ಕೋಟಿ ರೂಗಳನ್ನು ಪುನರ್ವಸತಿ ಮತ್ತು ದುರಸ್ತಿ ಕಾರ್ಯಗಳಿಗೆ ತೊಡಗಿಸಿದ್ದು, 1,799.39 ಕೋಟಿ ರೂಗಳನ್ನು ಪ್ರವಾಹ ಪೀಡಿತರಿಗೆ ಪರಿಹಾರವಾಗಿ ನೀಡಲಾಗಿದೆ. ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸಂಗ್ರಹಿಸಿರುವ ಮಾಹಿತಿಯಂತೆ ರಾಜ್ಯ ಆದಾಯ ಇಲಾಖೆಯಲ್ಲಿ ಲಭ್ಯವಾದ ದಾಖಲೆಗಳ ಅನ್ವಯ 1200 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ನಿಧಿಗೆ ನೀಡಿದ್ದು, ಇದನ್ನು ಬೆಳೆ ನಷ್ಟದ ಒಂದು ಭಾಗವಾಗಿ ಬಳಸಿಕೊಳ್ಳಲಾಗಿದೆ.

ಇನ್ನು ರಾಜ್ಯ ಸರ್ಕಾರವೇ ವಿವಿಧ ಇಲಾಖೆಗಳ ಮೂಲಗಳಿಂದ ಸುಮಾರು 7,856.95 ಕೋಟಿ ರೂಗಳನ್ನು ಸಂಗ್ರಹಿಸಿದೆ. ಇದರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನಿಧಿಗಳೂ ಕೂಡ ಸೇರಿದೆ ಎನ್ನಲಾಗಿದೆ. ಇನ್ನು 1,732  ಕೋಟಿ ರೂಗಳನ್ನು ಮನೆಗಳ ನವೀಕರಣ ಅಥವಾ ಪುನರ್ ನಿರ್ಮಾಣಕ್ಕಾಗಿ ವಿತ್ತ ಸಚಿವಾಲಯವು ರಾಜ್ಯ ಗೃಹ ನಿರ್ಮಾಣ ಇಲಾಖೆಗೆ ನೀಡಿದೆ ಎನ್ನಲಾಗಿದೆ. ಅಂತೆಯೇ ಪ್ರವಾಹ ಪರಿಹಾರ ನಿಧಿಗೆ 289. 50 ಕೋಟಿ ರೂಗಳನ್ನು ವಿನಿಯೋಜಿಸಲಾಗಿದ್ದು, ಕೇಂದ್ರ ಬಿಡುಗಡೆ ಮಾಡಿದ 1800 ಕೋಟಿ ರೂಗಳ ಪೈಕಿ 600 ಕೋಟಿ ರೂಗಳನ್ನು ಮಾತ್ರ ರಾಜ್ಯ ವಿಪತ್ತು ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗಿದೆ.

ಆದರೆ ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರ ಇಷ್ಟು ಕಡಿಮೆ ಪ್ರಮಾಣದ ಹಣ ನೀಡಿದೆಯಾದರೂ, ಇದು ಮೊದಲ ಕಂತು ಎಂದು ಹೇಳುವ ಮೂಲಕ ನಿರಾಶ್ರಿತರಲ್ಲಿ ಕೊಂಚ ಭರವಸೆ ಮೂಡಿಸಿದೆ. ಆದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇಷ್ಚು ಪ್ರಮಾಣದಲ್ಲಿ ಈ ಕುರಿತಂತೆ ಸ್ಪಂದಿಸಿಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com