ಗ್ರಹಣದ ದಿನವೇ ನಡೀತು ಬರ್ಬರ ಹತ್ಯೆ! ಹಣಕ್ಕಾಗಿ ಸೋದರನನ್ನೇ ಕೊಂದ

ಗ್ರಹಣದ ದಿನವಾದ ಗುರುವಾರ (ಡಿಸೆಂಬರ್ ೨೬)ರಂದೇ ಬರ್ಬರ ಹತ್ಯೆಗೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಾಕ್ಷಿಯಾಗಿದೆ. ಹಣದ ವಿಚಾರದಲ್ಲಿ ಸೋದರರ ನಡುವೆ ಉಂತಾದ ಕಗಳ ತಮ್ಮನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಬಂಟ್ವಾಳದ ಮೇಲ್ಕಾರ್ ಸಮೀಪ ಬೋಳಂಗಡಿ ಎಂಬಲ್ಲಿ ನಡೆದಿದೆ.

Published: 26th December 2019 04:50 PM  |   Last Updated: 26th December 2019 04:50 PM   |  A+A-


ಗ್ರಹಣದ ದಿನವೇ ನಡೀತು ಬರ್ಬರ ಹತ್ಯೆ! ಹಣಕ್ಕಾಗಿ ಸೋದರನನ್ನೇ ಕೊಂದ

Posted By : Raghavendra Adiga
Source : Online Desk

ಬಂಟ್ವಾಳ: ಗ್ರಹಣದ ದಿನವಾದ ಗುರುವಾರ (ಡಿಸೆಂಬರ್ ೨೬)ರಂದೇ ಬರ್ಬರ ಹತ್ಯೆಗೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಾಕ್ಷಿಯಾಗಿದೆ. ಹಣದ ವಿಚಾರದಲ್ಲಿ ಸೋದರರ ನಡುವೆ ಉಂತಾದ ಕಗಳ ತಮ್ಮನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಬಂಟ್ವಾಳದ ಮೇಲ್ಕಾರ್ ಸಮೀಪ ಬೋಳಂಗಡಿ ಎಂಬಲ್ಲಿ ನಡೆದಿದೆ.

ಬೋಳಂಗಡಿ ನಿವಾಸಿ ಲಿಯೋ ಲೋಬೊ(50) ಮೃತ ದುರ್ದೈವಿ. ಈತನ ಅಣ್ಣ ಸಿರಿಲ್ ಲೋಬೋ ಈ ಕೊಲೆ ಆರೋಪಿಯಾಗಿದ್ದಾನೆ. 

ಇಬ್ಬರೂ ಅವಿವಾಹಿತರಾಗಿದ್ದು ಒಟ್ಟಿಗೇ ಮನೆಯಲ್ಲಿ ವಾಸವಿದ್ದರು. ನಿತ್ಯ ಕುಡಿದು ಬರುತ್ತಿದ್ದು ಇಬ್ಬರ ನಡುವೆ ಹಣದ ವಿಚಾರದಲ್ಲಿ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಇಂದೂ ಕೂಡ ಬೆಳಿಗ್ಗೆ ಹತ್ತರ ಸುಮಾರಿಗೆ ಅಣ್ಣ ತಮ್ಮಂದಿರ ನಡುವೆ ಹಣದ ವಿಚಾರದಲ್ಲಿ ಜಗಳ ಪ್ರಾರಂಭವಾಗಿದೆ. ಇಬ್ಬರೂ ದೊಣ್ಣೆಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ದೊಣ್ಣೆ ಏಟಿಗೆ ತಮ್ಮ ಲಿಯೋ ಮನೆಯಲ್ಲೇ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಇನ್ನು ಮೃತ ಲಿಯೋಗೆ ಆರೋಪಿಯಾದ ಅಣ್ಣ ಸಿರಿಲ್ ಸುಮಾರು ಒಂದೂವರೆ ಲಕ್ಷ ರು. ನೀಡಿದ್ದನೆನ್ನಲಾಗಿದ್ದು ಆ ಹಣ ವಾಪಾಸ್ ಕೊಡುವಂತೆ ಪೀಡಿಸುತ್ತಿದ್ದ ಎಂದು ಮಾಹಿತಿ ಬಂದಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿಡಿ ನಾಗರಾಜ್, ನಗರ ಠಾಣೆ ಸಿಬ್ಬಂದ್ ಅವಿನಾಶ್ ಹಾಗೂ ಇತರರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp