ಪಾಶ್ಚಾತ್ಯ ನಿಲುವಂಗಿಗೆ ಬದಲು ಬಿಳಿ ಖಾದಿ ವಸ್ತ್ರ; ವಿಟಿಯು ಘಟಿಕೋತ್ಸವದಲ್ಲಿ ಭಾರತೀಯ ಸಂಸ್ಕೃತಿ ಅನಾವರಣಕ್ಕೆ ಸಿದ್ದತೆ

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಘಟಿಕೋತ್ಸವದಲ್ಲಿ  ಪಾಶ್ಚಾತ್ಯ ಶೈಲಿಯ ನಿಲುವಂಗಿಗಳ ಬದಲಾಗಿ ವಿದ್ಯಾರ್ಥಿಗಳನ್ನು ಬಿಳಿ ಖಾದಿ ವಸ್ತ್ರದಲ್ಲಿ ಕಾಣುವಂತಹ ವಿಶೇಷ ಸನ್ನಿವೇಶ ಒದಗಿ ಬಂದಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಭಾರತದಾದ್ಯಂತದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸುತ್ತೋಲೆಯನ್ನು ಹೊರಡಿಸಿ, ನಿ
ವಿಟಿಯು
ವಿಟಿಯು

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಘಟಿಕೋತ್ಸವದಲ್ಲಿ  ಪಾಶ್ಚಾತ್ಯ ಶೈಲಿಯ ನಿಲುವಂಗಿಗಳ ಬದಲಾಗಿ ವಿದ್ಯಾರ್ಥಿಗಳನ್ನು ಬಿಳಿ ಖಾದಿ ವಸ್ತ್ರದಲ್ಲಿ ಕಾಣುವಂತಹ ವಿಶೇಷ ಸನ್ನಿವೇಶ ಒದಗಿ ಬಂದಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಭಾರತದಾದ್ಯಂತದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸುತ್ತೋಲೆಯನ್ನು ಹೊರಡಿಸಿ, ನಿಲುವಂಗಿಯನ್ನು ಖಾದಿಯೊಂದಿಗೆ ಬದಲಿಸಿರುವುದಾಗಿ ತಿಳಿಸಿದ್ದು ವಿಟಿಯು ಈ ಆದೇಶ ಪಾಲನೆ ಮಾಡಲಿರುವ ದೇಶದ ಪ್ರಥಮ ವಿಶ್ವವಿದ್ಯಾನಿಕಯವೆಂದು ಕರೆಸಿಕೊಳ್ಳಲು ಸಿದ್ದವಾಗಿದೆ.  ಫೆಬ್ರವರಿ 8 ರಂದು ನಿಗದಿಯಾದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಈ ಬಿಳಿ ಬಣ್ಣದ ಖಾದಿ ವಸ್ತ್ರವನ್ನು ತೊಟ್ಟು ಪದವಿ ಪಡೆಯಲಿದ್ದಾರೆ.

ಡಿಸೆಂಬರ್ 24 ರ ಸುತ್ತೋಲೆಯಲ್ಲಿ, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರು ವೈಯಕ್ತಿಕವಾಗಿ ಭಾಗವಹಿಸುವ ಅಥವಾ ಪದವಿಗಳನ್ನು ಪಡೆಯುವ ಎಲ್ಲಾ ಅಭ್ಯರ್ಥಿಗಳು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು  ನಿರ್ದೇಶಿಸಿದ್ದರು. ಸುತ್ತೋಲೆಯ ಪ್ರಕಾರ, ಹುಡುಗಿಯರು ಬಿಳಿ ಸೀರೆ ಅಥವಾ ಬಿಳಿ ಸಲ್ವಾರ್ ಕಮೀಜ್ ಅನ್ನು ಕೈಮಗ್ಗ ಬಟ್ಟೆಯಿಂದ ಮಾಡಿದ ದುಪಟ್ಟಾವನ್ನು ಧರಿಸಬೇಕು. ಹುಡುಗರು ಪೂರ್ಣ ತೋಳಿನ ಬಿಳಿ ಶರ್ಟ್ ಮತ್ತು ಕೈಮಗ್ಗ ಬಟ್ಟೆಯಿಂದ ಮಾಡಿದ ಬಿಳಿ ಪ್ಯಾಂಟ್ ಧರಿಸಬೇಕು. "ಈ ಸುತ್ತೋಲೆಯನ್ನು ನಿಮ್ಮ ಕಾಲೇಜಿನ ಎಲ್ಲ ಅಭ್ಯರ್ಥಿಗಳ ಗಮನಕ್ಕೆ ತರಲು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ತಪ್ಪಿಲ್ಲದೆ ಅನುಸರಿಸಬೇಕೆಂದು ತಿಳಿಸಿಸಲು  ಈ ಮೂಲಕ ವಿನಂತಿಸಲಾಗಿದೆ" ಎಂದು ಸುತ್ತೋಲೆ ತಿಳಿಸಿದೆ.

ಆದರೆ, ಇದಕ್ಕೆ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರಲ್ಲಿ ಕೆಲವರು ಹೊಸ ಉಡುಗೆ ಸರಿಯಾಗಿದೆ ಆದರೆ ಅದು ಬಿಳಿ ಬಣ್ಣದಲ್ಲಿರುವುದು ಕೆಟ್ಟ ಯೋಚನೆ ಎಂದು ಹೇಳಿದ್ದಾರೆ. "ನಾವು ನಮ್ಮದೇ ಸ್ವಂತ ವಿನ್ಯಾಸದ ಘಟಿಕೋತ್ಸವ ವಸ್ತ್ರಗಳನ್ನು ವಿನ್ಯಾಸಗೊಳಿಸಿಕೊಳ್ಳಬಹುದಿತ್ತು. ಬಿಳಿ ನೀರಸ ಬಣ್ಣವಾಗಿರಲಿದ್ದು ಬಿಳಿ ಬಣ್ಣದ ಕೈಮಗ್ಗದ ಪ್ಯಾಂಟ್ ಧರಿಸಿದ ಹುಡುಗರು ನಿಸ್ತೇಜರಂತೆ ಕಾಣುತ್ತಾರೆ ”ಎಂದು ಬೆಳಗಾವಿಯ ಕಾಲೇಜಿನ ವಿದ್ಯಾರ್ಥಿ ಸಂಗಮೇಶ್ ರಾಮ್ ಹೇಳಿದರು

ಪಾಶ್ಚಾತ್ಯ ಶೈಲಿಯ ನಿಲುವಂಗಿಯಲ್ಲಿ ಯಾವ ವಸ್ತು ಬಳಸಿಕೊಂಡಿದ್ದರೂ ನಿಲುವಂಗಿ ಮತ್ತು ಪದವಿ ಕ್ಯಾಪ್ ವಾಸ್ತವವಾಗಿ ಎದ್ದು ಕಾಣುತ್ತದೆ ಮತ್ತು ಬಹಳ ವಿಶೇಷವಾಗಿರುತ್ತಿತ್ತು.  ಹೊಸ ಉಡುಪಿನಿಂದ ನಾವು ನಮ್ಮ ಪದವಿ ಪ್ರಧಾನ ಸಮಾರಂಭದಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ ಎಂಬ ಭಾವನೆ ಇರುವುದಿಲ್ಲ" ಇನ್ನೊಬ್ಬ ವಿದ್ಯಾರ್ಥಿನಿ ಚೈತ್ರ ಮೆನಸಿನಕಾಯಿ ಹೇಳಿದ್ದಾರೆ.

ವಿಟಿಯು ನಂತರ, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಈ ಪ್ರವೃತ್ತಿಯನ್ನು ಅನುಸರಿಸುತ್ತವೆ. ಆದರೆ, ಉಡುಪಿನ ಬಣ್ಣದ ಸಂಯೋಜನೆಯನ್ನು ವಿಶ್ವವಿದ್ಯಾಲಯಗಳಿಗೆ ಬಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ ಕೆ ಕೆ ವೇಣುಗೋಪಾಲ್ ಈ ಕ್ರಮವನ್ನು ಶ್ಲಾಘಿಸಿದ್ದಾರೆ. "ನಾವು ಹಲವಾರು ಖಾದಿ ಉತ್ಪಾದನಾ ಘಟಕಗಳಿಗೆ ಸಹಾಯ ಮಾಡುತ್ತೇವೆ. ನಿಲುವಂಗಿಗಳು ಪಾಶ್ಚಿಮಾತ್ಯವಾಗಿದ್ದು, ನಾವು ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಬೇಕು ಮತ್ತು ಉತ್ತೇಜಿಸಬೇಕು, ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com