ಪಂಕ್ಚರ್'ವಾಲಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ತೇಜಸ್ವಿ ಸೂರ್ಯ

ಪೌರತ್ವ ಕಾಯ್ದೆ ವಿರುದ್ಧ ಹೋರಾಟ ನಡೆಸಿದವರ ವಿರುದ್ಧ ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ಹೋರಾಟ ನಡೆಸಿದವರ ವಿರುದ್ಧ ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ತೇಜಸ್ವಿಯವರು, ಎದೆ ಸೀಳಿದರೆ ಒಂದಕ್ಷರ ಇಲ್ಲದವರು, ಪಂಕ್ಚರ್ ಹಾಕುವವರಿಂದ ಗಲಭೆಗಳು ನಡೆಯುತ್ತಿವೆ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತವೆ. 

ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರು, ನಾನು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಹಿಂದೆ ಕೂಡ ನೂರಾರು ಹೇಳಿಕೆಗಳನ್ನು ನೀಡಿದ್ದೇನೆ. ಆದರೆ, ಇದೀಗ ಕೇವಲ ಒಂದು ಹೇಳಿಕೆಯನ್ನೇ ಗುರಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 

ಎನ್ಆರ್'ಸಿ ಮತ್ತು ಪೌರತ್ವ ಕಾಯ್ದೆ ಬಿಜೆಪಿ ವರ್ಚಸ್ಸನ್ನು ಹಾಳು ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಪಿಸಿದ ಅವರು, ಖಂಡಿತವಾಗಿಯೂ ಇಲ್ಲ. ಇದು ವಿರೋಧ ಪಕ್ಷಗಳ ದಿವಾಳಿತನವನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮಹಾರಾಷ್ಟ್ರ, ಜಾರ್ಖಾಂಡ್ ಚುನಾವಣಾ ಫಲಿತಾಂಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗಲೂ ನಾವು ನಮ್ಮ ಪಕ್ಷ ಏಕೈಕ ದೊಡ್ಡ ಪಕ್ಷವಾಗಿಯೇ ಇದೆ. ಶೇ.7ರಷ್ಟು ಸೀಟುಗಳನ್ನು ಕಳೆದುಕೊಂಡಿದ್ದೇವೆ. ಫಡ್ನವೀಸ್ ಈಗಲೂ ಪ್ರಸಿದ್ಧ ನಾಯಕರಾಗಿದ್ದಾರೆ. ಇನ್ನು ಜಾರ್ಖಾಂಡ್ ನಲ್ಲಿ ಕೆಲವೆಡೆ ಆಡಳಿತ ವಿರೋಧಿತನಗಳಿವೆ. ಕೆಲ ಶಕ್ತಿಗಳನ್ನು ನಾವು ಕಳೆದುಕೊಂಡಿದ್ದೇನೆ. ಆದರೆ, ರಾಷ್ಟ್ರೀಯ ನಾಯಕತ್ವ ಇದನ್ನು ಪರಿಹರಿಸಲಿದೆ. ಈ ಬಗ್ಗೆ ಹೇಳಿಕೆ ನೀಡುವ ಸ್ಥಾನದಲ್ಲಿ ನಾನಿಲ್ಲ ಎಂದಿದ್ದಾರೆ. 

ಸಿಎಎ, ಎನ್ಆರ್ಸಿ ಹಾಗೂ ಎನ್'ಪಿಆರ್'ನ್ನು ಮೂಲವಾಗಿ ವಿರೋಧಿಸುತ್ತಿರುವವರು ಕಾಂಗ್ರೆಸ್ ನಾಯಕರು. ಬಿಜೆಪಿ ಇವುಗಳನ್ನು ಕಾನೂನಾಗಿ ಮಾಡಲು ಯತ್ನಿಸುತ್ತಿವೆ. ಮನಮೋಹನ್ ಸಿಂಗ್ ಅವರು ಈ ಕಾಯ್ದೆಯನ್ನು ಜಾರಿಗೆ ತಂದಿದ್ದರೆ, ಅದು ಜಾತ್ಯಾತೀತ. ನರೇಂದ್ರ ಮೋದಿ ಜಾರಿಗೆ ತಂದರೆ ಕೋಮವವಾದಿ, ಕಾಯ್ದೆ ಕುರಿತು ಕಾಂಗ್ರೆಸ್ ದೇಶದಲ್ಲಿ ಆತಂಕ ಸೃಷ್ಟಿಸು್ತಿದೆ. ಭಾರತ ಭಾರತೀಯ ಹಿಂದೂಗಳು, ಭಾರತೀಯ ಮುಸ್ಲಿಮರು ಹಾಗೂ ಇತರೆ ಭಾರತೀಯರಿಗೆ ಸೇರಿದ್ದು. ಸಿಎಎ ಹಾಗೂ ಎನ್ಆರ್'ಸಿ ಬಗ್ಗೆ ತಪ್ಪು ಮಾಹಿತಿಗಳು ಹರಡುತ್ತಿವೆ ಎಂದು ತಿಳಿಸಿದ್ದಾರೆ. 

ಸಂಸದರಾಗಿ ಈ 7 ತಿಂಗಲಲ್ಲಿ ಏನನ್ನು ಕಲಿತಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜನರ ಮಾತನ್ನು ಸಂಪೂರ್ಣವಾಗಿ ಕೇಳುವುದು ಹಾಗೂ ಅವರ ಆಲೋಚನೆ ಹಾಗೂ ಹೃದಯದ ಮಾತನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಿದ್ದೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com