ಚಿಕ್ಕೋಡಿ: ಸಹಾಯ ಮಾಡುವವನಂತೆ ನಟಿಸಿ ಮೋಸ ಮಾಡಿ ವಂಚನೆ, ವ್ಯಕ್ತಿ ಬಂಧನ

ಅಂಕಲಿ ಬಸ್ ಸ್ಟಾಂಡ್ ಹತ್ತಿರ ಇರುವ ಎಟಿಎಂನಲ್ಲಿ ಹಣ ಪಡೆದುಕೊಳ್ಳಲು ಬಂದಂತ ಗ್ರಾಹಕರಿಗೆ ಸಹಾಯ ಮಾಡುವವನಂತೆ ನಟಿಸಿ ಮೋಸ ಮಾಡಿ ವಂಚನೆಯಿಂದ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಅಂಕಲಿ ಪೋಲಿಸರು ಬಂಧಿಸಿದ್ದಾರೆ.
ಮೋಸ ಮಾಡಿ ವಂಚನೆ, ವ್ಯಕ್ತ ಬಂಧನ
ಮೋಸ ಮಾಡಿ ವಂಚನೆ, ವ್ಯಕ್ತ ಬಂಧನ

ಚಿಕ್ಕೋಡಿ: ಅಂಕಲಿ ಬಸ್ ಸ್ಟಾಂಡ್ ಹತ್ತಿರ ಇರುವ ಎಟಿಎಂನಲ್ಲಿ ಹಣ ಪಡೆದುಕೊಳ್ಳಲು ಬಂದಂತ ಗ್ರಾಹಕರಿಗೆ ಸಹಾಯ ಮಾಡುವವನಂತೆ ನಟಿಸಿ ಮೋಸ ಮಾಡಿ ವಂಚನೆಯಿಂದ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಅಂಕಲಿ ಪೋಲಿಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪಟ್ಟಣದ ನಿವಾಸಿ ಅಮೀತ ಉರ್ಪ ಸಾಗರ ರಾಜು ಕಮತೆ (22) ಬಂಧನಕ್ಕೊಳಗಾದ ಆರೋಪಿ. ಇತ ಅಂಕಲಿ, ರಾಯಬಾಗ, ಚಿಕ್ಕೋಡಿಗಳಲ್ಲಿ ಎಟಿಎಂಗೆ ಹಣ ಪಡೆದುಕೊಳ್ಳಲು ಬರುವ ಜನರಿಗೆ ನಂಬಿಸಿ ಅವರ ಎಟಿಎಂ ಪಡೆದುಕೊಂಡು ಸಹಾಯ ಮಾಡುವವನಂತೆ ನಟಿಸಿ ಅವರ ಪಿನ್ ನಂಬರ ತೆಗೆದುಕೊಳ್ಳುತ್ತಿದ್ದ. ನಂತರ ಏನೋ ಸಮಸ್ಯೆಯಾಗಿದೆ ಹಣ ಬರುತ್ತಿಲ್ಲ ಅಂತಾ ತಿಳಿಸಿ ಬೇರೊಂದು ಎಟಿಎಂ ಕಾರ್ಡ್ ಕೊಡುತ್ತಿದ್ದ ಹೀಗೆ ಸಾಕಷ್ಟು ವಂಚನೆ ಮಾಡುತ್ತಿದ್ದ ಆರೋಪಿ ಈಗ ಪೋಲಿಸರ ಬಲೆಗೆ ಬಿದ್ದಿದ್ದಾನೆ.

ವಿವಿಧ ಬ್ಯಾಂಕಗಳ ಒಟ್ಟು 09 ಎಟಿಎಂ ಕಾರ್ಡ್ ಗಳು 40,000 ರೂ ಹಣ. ಒಂದು ಕಾರು ಹಾಗೂ ಒಂದು ಸಣ್ಣ ಡೈರಿ ವಶಪಡಿಸಿಕೊಂಡಿದ್ದು, ಒಟ್ಟು ಆರೋಪಿ ಕಡೆಯಿಂದ 54,000 ಮೌಲ್ಯದ ಸ್ವತ್ತನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com