ವಿಶ್ವಸಂತ ವಿಶ್ವೇಶ ತೀರ್ಥರ ಬಗ್ಗೆ ವರಕವಿ ಬೇಂದ್ರೆ 1968ರಲ್ಲಿ ಆಡಿದ ಮಾತುಗಳು!

ಭಾನುವಾರ ಕೃಷ್ಣೈಕ್ಯರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಕುರಿತಂತೆ ಕನ್ನಡದ ಮಹತ್ವದ ಕವಿ, ವರಕವಿ ದ.ರಾ. ಬೇಂದ್ರೆ 1968ರಷ್ಟು ಹಿಂದೆಯೇ ಹೇಳಿದ್ದ ಮಾತುಗಳು ನಿಜಕ್ಕೂ ಸ್ತುತ್ಯಾರ್ಹವಾದವು. 
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಭಾನುವಾರ ಕೃಷ್ಣೈಕ್ಯರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಕುರಿತಂತೆ ಕನ್ನಡದ ಮಹತ್ವದ ಕವಿ, ವರಕವಿ ದ.ರಾ. ಬೇಂದ್ರೆ 1968ರಷ್ಟು ಹಿಂದೆಯೇ ಹೇಳಿದ್ದ ಮಾತುಗಳು ನಿಜಕ್ಕೂ ಸ್ತುತ್ಯಾರ್ಹವಾದವು.

ಬೇಂದ್ರೆಯವರು ವಿಶ್ವೇಶತೀರ್ಥರ ಬಗೆಗೆ ಬರೆದಿದ್ದ ಮೆಚ್ಚುಗೆಯ ನುಡಿಗಳು 1968ರಲ್ಲಿ 'ನಿವೇದನ' 'ತತ್ವವಾದ' ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿತ್ತು. 

"ಸಜ್ಜನರನು ಕಾಪಾಡುವ ಸ್ವಾಮೀ ಪಾಡುವೆ ನಿನ್ನಾನಾಮಾ; ವಿಶ್ವಕ್ಕೂ ಸರಿ, ವಿಶ್ವನಿಗೂ ಸರಿ; ವಿಶ್ವೇಶ್ವರನಿಗೂ ಸರಿಯೇ" ಎಂದು ಬೇಂದ್ರೆಶ್ರೀಗಳ ಬಗೆಗೆ ಬರೆದಿದ್ದರು. ಇದನ್ನು  ಗುರು ಕುಲಕರ್ಣಿ ಎನ್ನುವವರು ಡಿ. 28ರಂದು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

"ಪೂಜ್ಯ ಶ್ರೀ ವಿಶ್ವೇಶತೀರ್ಥರು ಗೆಳೆಯ ಹರಿದಾಸ ಭಟ್ಟರ ಮನೆಯಲ್ಲಿ ಇರುವಾಗ ಸ್ವಪ್ನದಲ್ಲಿ ಬಂದು ಅಂತ:ಕರಣದ ಮಾತನಾಡಿದರು. ಕನಕನ ಸೇವೆ ನನಗೂ ಉಡುಪಿಯಲ್ಲಿ ಸಂದಿತು.

ಬಾಲ್ಯದಲ್ಲಿ ದಾಸ ಗೋವಿಂದಪ್ಪನವರಿಂದ, ತಾರುಣ್ಯದಲ್ಲಿ ಗುರುವರ್ಯ ಮಧ್ವಾಚಾರ್ಯ ಕಟ್ಟಿಯವರಿಂದ ಸಾಗಿಬಂದ ಈ ಸತ್ಸಂಗಫಲವು 73ರ ಈ ಮುಕ್ಕಟ್ಟಿನಲ್ಲಿ ಇಂಥ ಮಹನೀಯರ ಸ್ನೇಹದಿಂದ ಸಫಲವೆನಿಸುತ್ತ

ಪೇಜಾವರ ಸ್ವಾಮಿಗಳು ಅಸಾಮಾನ್ಯರು, ಶ್ರೀ ಕೃಷ್ಣನಿಗೆ ಮಾನ್ಯರು; ಲೋಕಮಾನ್ಯರು. ಅಲ್ಲಲ್ಲಿ ಕೆಲವು ವಿಶಿಷ್ಟರ ವಿಮರ್ಶೆಗೆ ಗುರಿಯಾಗುತ್ತಿದ್ದಾರೆ. ಬಂಗಾರಕ್ಕೂ, ಖದಿರಾಂಗಾರಕ್ಕೂ ಬದ್ಧ ವೈರವೇನೂ ಇಲ್ಲ. ಸ್ವಾಮಿ ಭಕ್ತರ ಸ್ವೋತ್ಕರ್ಷಕ್ಕೆ ಯಾವುದೂ ಸಾಧಕ.

ಸಜ್ಜನರನು ಕಾಪಾಡುವ ಸ್ವಾಮೀ ಪಾಡುವೆ ನಿನ್ನಾನಾಮಾ;
ವಿಶ್ವಕ್ಕೂ ಸರಿ, ವಿಶ್ವನಿಗೂ ಸರಿ; ವಿಶ್ವೇಶ್ವರನಿಗು ಸರಿಯೇ;
ಓಂ ವಿಶ್ವಸ್ಥೈನಮೋ ಎನ್ನುವೆನು ದಾರಿದೋರು ದೊರೆಯೇ.
ಓಹೊ ಪೂರ್ಣಕಾಮಾ ನಮೊ ಬ್ರಹ್ಮಣ್ಯದೇವಾಯ!!

ಹೀಗೆಂದು ಬೇಂದ್ರೆ ಬರೆದಿದ್ದ ಬರಹ 'ನಿವೇದನ' - 'ತತ್ವವಾದ' ವಿಶೇಷ ಸಂಚಿಕೆ, 1968ರಲ್ಲಿ ಪ್ರಕಟಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com