ಕರಮುಡಿಯ ವೀರಯೋಧ  ವೀರೇಶ್​ ಕುರತ್ತಿ  ಪಂಚಭೂತಗಳಲ್ಲಿ ಲೀನ

 ಜಮ್ಮು ಕಾಶ್ಮೀರದಲ್ಲಿ ಉಗ್ರರೊಡನೆ ಹೋರಾಡಿ ಹುತಾತ್ಮನಾದ ಗದಗ ಜಿಲ್ಲೆ ಕರಮುಡಿ ಗ್ರಾಮದವರಾದ ಯೋಧ  ವೀರೇಶ್​ ಕುರತ್ತಿ  ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಓಡನೆ ನೆರವೇರಿದೆ.
ಕರಮುಡಿಯ ವೀರಯೋಧ  ವೀರೇಶ್​ ಕುರತ್ತಿ  ಪಂಚಭೂತಗಳಲ್ಲಿ ಲೀನ
ಕರಮುಡಿಯ ವೀರಯೋಧ ವೀರೇಶ್​ ಕುರತ್ತಿ ಪಂಚಭೂತಗಳಲ್ಲಿ ಲೀನ

ಗದಗ: ಜಮ್ಮು ಕಾಶ್ಮೀರದಲ್ಲಿ ಉಗ್ರರೊಡನೆ ಹೋರಾಡಿ ಹುತಾತ್ಮನಾದ ಗದಗ ಜಿಲ್ಲೆ ಕರಮುಡಿ ಗ್ರಾಮದವರಾದ ಯೋಧ  ವೀರೇಶ್​ ಕುರತ್ತಿ  ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಓಡನೆ ನೆರವೇರಿದೆ.

 ಶನಿವಾರ ಮಧ್ಯಾಹ್ನ ಹುತಾತ್ಮ ಯೋಧನ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನೆರವೇರಿದವು. ಶನಿವಾರ ಬೆಳಗಾವಿಯಿಂದ ನರಗುಂದದ ಕೊನ್ನೂರು ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿತ್ತು. ನಂತರ ಮೆರವಣಿಗೆಯಲ್ಲಿ ಕರಮುಡಿಗೆ ಕರೆತರಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಅವರು ಅಂತಿಮ ವಿಧಿಗಳ ಸಿದ್ಧತೆಗಳನ್ನು ನೋಡಿಕೊಂಡರು. ಅವರು ಸುಬೇದಾರ್‌ನ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ಗೌರವ ಧನ  ಘೋಷಿಸಿದರು ಮತ್ತು  ಯೋಧನ ಮಗಳ ಶಿಕ್ಷಣಕ್ಕಾಗಿ 1.5 ಲಕ್ಷ ರೂ. ಮತ್ತು ಅವರ ಮಗನಿಗೆ 50,000 ರೂ.  ನೀಡುವುದಾಗಿಯೂ, ಸರ್ಕಾರಿ ಸೌಲಭ್ಯವನ್ನು ಶೀಘ್ರವೇ ಒದಗಿಸುವುದಾಗಿಯೂ ಹೇಳಿದರು.   ಪಿ ಸಿ ಗದ್ದಿಗೌಡರ್, ಮಾಜಿ ರಾನ್ ಶಾಸಕ ಜಿ ಎಸ್ ಪಾಟೀಲ್, ಗಡಾಗ್ ಎಸ್ಪಿ ಶ್ರೀನಾಥ್ ಜೋಶಿ ಮತ್ತಿತರೆ ಅಧಿಕಾರಿಗ:ಳು ಹುತಾತ್ಮನಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ.

ಸೈನ್ಯದ ಅಧಿಕಾರಿಗಳು,  ನೂರಾರು ಶಾಲಾ ಮಕ್ಕಳು, ಸಾವಿರಾರು ಜನರ ಸಮ್ಮುಖದಲ್ಲಿ ಯೋಧನ ಅಂತ್ಯಸಂಸ್ಕಾರ ನೆರವೇರಿದೆ. "ವೀರೇಶ್, ನಮ್ಮ ಮಣ್ಣಿನ ಧೈರ್ಯಶಾಲಿ ಸೈನಿಕ"  ಎಂಬ ಘೋಷಣೆ ಮೊಳಗಿಸುತ್ತಾ ಯೋಧನನ್ನು ಮಣ್ಣು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com