ಸಂಕ್ರಾತಿ ಹಬ್ಬದ ಬಳಿಕ ಸಂಪುಟ ವಿಸ್ತರಣೆ: ಸಚಿವ ಶ್ರೀರಾಮುಲು

ಸಂಕ್ರಾಂತಿ ಹಬ್ಬದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.
ಬಿ ಶ್ರೀರಾಮುಲು
ಬಿ ಶ್ರೀರಾಮುಲು

ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.


ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ವಿವರಿಸಿದರು.


ನೆಲ, ಜಲ, ಭಾಷೆ ಬಗ್ಗೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ:
ಉದ್ದವ್ ಠಾಕ್ರೆ ಸಿಎಂ ಆದ ನಂತರ ಶಿವಸೈನಿಕರ ಪುಂಡಾಟ ಹೆಚ್ಚಾಗಿದೆ. ನೆಲ,ಜಲ,ಭಾಷೆ ವಿಚಾರದಲ್ಲಿ ನಾವೆಲ್ಲ ಒಗ್ಗಟಾಗಿರುತ್ತೇವೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಗಡಿ ಖ್ಯಾತೆಯನ್ನು ಸರ್ಕಾರ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಹೋರಾಟ ನಿರಂತರವಾಗಿ ನಡೆದಿದೆ. ನಾವು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದರು.


ದೇವೇಂದ್ರ ಫಡ್ನವಿಸ್ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆಯೂ ಹೈ ಕಮಾಂಡ್ ಗಮನಿಸುತ್ತಿದೆ. ಕೇಂದ್ರದ ನಾಯಕರು ಇದರ ಬಗ್ಗೆ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದರು.


ಬೆಳಗಾವಿ ಕರ್ನಾಟಕದ್ದು. ಆದರೆ ರಾಜಕೀಯ ಕಾರಣಗಳಿಗೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಅದಕ್ಕೆ ನಾವು ಹೆದರಬೇಕಾದ ಅಗತ್ಯವಿಲ್ಲ. ಶಿವಸೇನೆಯ ಪುಂಡಾಟಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.


ಏಸು, ಅಲ್ಲಾಹ್, ಕೃಷ್ಣ ಎಲ್ಲರೂ ಒಂದೇ:
ಏಸು, ಕೃಷ್ಣ ಅಲ್ಲಾಹ್ ಹಾಗೂ ನಮ್ಮ ಧರ್ಮಗುರುಗಳು ಎಲ್ಲರೂ ಒಂದೇ. ರಾಜಕೀಯ ಕಾರಣಗಳಿಗೆ ದೇವರು ಧರ್ಮದ ಹೆಸರು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು.


ಪೌರತ್ವ ಕಾಯ್ದೆ ವಿವಾದ ಹಾಗೂ ಈಗ ಏಸು ಬೆಟ್ಡ ವಿವಾದ ಎರಡಕ್ಕೂ ಲಿಂಕ್ ಇದೆ. ಜನರು ಪ್ರಬುದ್ಧರಾಗಿದ್ದಾರೆ. ಅವರೆಲ್ಲರಿಗೂ ಇದು ಅರ್ಥ ಆಗುತ್ತದೆ. ವೋಟ್ ಬ್ಯಾಂಕ್ ಗಾಗಿ ಎಲ್ಲವನ್ನೂ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.


ಮುನಿಸು ಮರೆತು ಸಭೆಗೆ ಬಂದ ಶ್ರೀರಾಮುಲು!:
ಡಿಸಿಎಂ ಸ್ಥಾನ ಸಿಗದೆ ಇರುವುದಕ್ಕೆ ಸಿಎಂ ಮೇಲೆ ರಾಮುಲು ಮುನಿಸಿಕೊಂಡಿದ್ದ ಸಚಿವ ಶ್ರೀರಾಮುಲು ಇಂದು ಸಚಿವ ಸಂಪುಟ ಸಭೆಗೆ ಅಗಮಿಸಿದ್ದಾರೆ.


ಮುನಿಸು ಮರೆತು ಶ್ರೀರಾಮುಲು ಸಂಪುಟ ಸಭೆಗೆ ಬಂದಿದ್ದಾರೆ. ಕಳೆದ ಸಚಿವ ಸಂಪುಟ ಸಭೆಗೆ ಶ್ರೀರಾಮುಲು ಗೈರಾಗಿದ್ದರು. ಹಿರಿಯ ಅಧಿಕಾರಿಗಳ ಜೊತೆಗಿನ ಸಿಎಂ ಸಭೆಗೂ ಶ್ರೀರಾಮುಲು ಗೈರಾಗಿದ್ದರು. ಹಲವು ಸಭೆಗೆ ಗೈರಾಗಿ ಸಿಎಂರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಇಂದಿನ ಸಚಿವ ಸಂಪುಟ ಸಭೆಗೆ ಶ್ರೀರಾಮುಲು ಹಾಜರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com