ಭೂ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎಂಗೆ  ಎಚ್.ಕೆ.ಪಾಟೀಲ್ ಪತ್ರ

ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯ ಭೂ ಕಬಳಿಕೆ/ಒತ್ತುವರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿದಾರರ ಮೇಲೆ ಕಠಿಣ ಕ್ರಮ‌ಜರುಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಕೆ‌.ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯ ಭೂ ಕಬಳಿಕೆ/ಒತ್ತುವರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿದಾರರ ಮೇಲೆ ಕಠಿಣ ಕ್ರಮ‌ಜರುಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಕೆ‌.ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

ಸರ್ಕಾರ ಒತ್ತುವರಿ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸಲು ಕ್ರಮ ಕೈಗೊಂಡು ಪ್ರಕರಣಗಳನ್ನು ಪರಿಶೀಲಿಸಲುರಚನೆಯಾಗಿದ್ದ ಜಂಟಿ ಸದನ ಸಮಿತಿಯು ವಿಧಾನ ಮಂಡಲಕ್ಕೆ 2 ಭಾಗಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿ 30,000 ಎಕರೆ ಸರ್ಕಾರಿ ಭೂ ಪ್ರದೇಶವು ಒತ್ತುವರಿಯಾಗಿದೆ ಎಂದು ಮತ್ತು ಈ ಒತ್ತುವರಿ ಪ್ರಕರಣದಲ್ಲಿ 33,812 ಜನರು ಭಾಗಿಯಾಗಿದ್ದಾರೆಂದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು.

ಕಂದಾಯ, ಅರಣ್ಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ವಕ್ಫ್ ಮಂಡಳಿ, ಸಹಕಾರ ಇಲಾಖೆ, ಪಶು ಸಂಗೋಪನಾ ಇಲಾಖೆ, ಮುಜರಾಯಿ ಇಲಾಖೆ, ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ, ಪುರಸಭೆ/ನಗರಸಭೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಿಮ್ಹಾನ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಅತ್ಯಧಿಕ ಮೌಲ್ಯಯುತ ಜಮೀನು ಒತ್ತುವರಿಯಾಗಿದ್ದ ಪ್ರಕರಣಗಳಾಗಿವೆ‌ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೇ ಇನಾಂ ರದ್ದತಿ ಅಧಿನಿಯಮ, ನಗರ ಭೂಪರಿಮಿತಿ ಮತ್ತು ನಿಯಂತ್ರಣ ಅಧಿನಿಯಮ ಹಾಗೂ ಭೂ ಸುಧಾರಣಾ ಅಧಿನಿಯಮ ಮುಂತಾದ ಅಧಿನಿಯಮಗಳಲ್ಲಿ ಒಟ್ಟು 12012 ಎಕರೆ ಭೂಮಿಯು ಭೂ ಒತ್ತುವರಿಯಾಗಿದೆ.

ಇಂತಹ ಭೂ ಕಬಳಿಕೆ ಒತ್ತುವರಿಗಳ ಹಿಂದೆ ಭೂ ಮಾಫಿಯಾ ಮತ್ತು ದುರಾಸೆಯ ಬಿಲ್ಡರ್‌ಗಳು, ದಳ್ಳಾಳಿಗಳು ಹಾಗೂ ಸಹಕಾರ ಸಂಘಗಳು, ಈ ಪ್ರಕರಣದಲ್ಲಿ ಭಾಗಿಯಾಗಿವೆ ಎಂದು ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ತನ್ನ ಸತ್ಯಶೋಧನಾ ವರದಿಯಲ್ಲಿ ಪತ್ತೆ ಹಚ್ಚಿದೆ. 

ಈ ರೀತಿ ಕಬಳಿಕೆಯಾದ ಸರ್ಕಾರಿ ಜಮೀನಿನ ಮಾರ್ಗದರ್ಶಕ ಮೌಲ್ಯವನ್ನು ಆಧರಿಸಿದ ಅಂದಿನ ಬೆಲೆಯಂತೆ ಸುಮಾರು 27 ಸಾವಿರ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com