ಅಯೋಧ್ಯೆ ವಿಚಾರದಲ್ಲಿ ನಿರಂತರ ಹೋರಾಟ ನಡೆಸಿದ್ದ ಶ್ರೀಗಳು ಮಂದಿರ ನೋಡದೆಯೇ ಹೊರಟು ಹೋದರು..!

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪಣತೊಟ್ಟು ನಿರಂತರ ಹೋರಾಟ  ನಡೆಸಿಕೊಂಡು ಬಂದಿದ್ದ ಪೇಜಾವರ ಶ್ರೀಗಳು, ಮಂದಿರ ನೋಡದೆಯೇ ಇಹಲೋಕ ತ್ಯಜಿಸಿದ್ದಾರೆ. 
ಪೇಜಾವರ ಶ್ರೀ
ಪೇಜಾವರ ಶ್ರೀ

ಉಡುಪಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪಣತೊಟ್ಟು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದ ಪೇಜಾವರ ಶ್ರೀಗಳು, ಮಂದಿರ ನೋಡದೆಯೇ ಇಹಲೋಕ ತ್ಯಜಿಸಿದ್ದಾರೆ. 

ರಾಮಜನ್ಮಭೂಮಿ ವಿವಾದ ಕುರಿತು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿ ತೀರ್ಪು ನೀಡಿದ್ದನ್ನು ಆಲಿಸಿದ್ದ ಕಟ್ಟರ್ ಹಿಂದುತ್ವವಾದಿ ಉಡುಪಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸಂತೋಷ ವ್ಯಕ್ತಪಡಿಸಿದ್ದರು. 

ನನ್ನ ವಯಸ್ಸಿನಲ್ಲಿ ಅಯೋಧ್ಯೆ ಮಂದಿರ ತೀರ್ಪು ಬರುತ್ತದೆ ಎಂದುಕೊಂಡಿರಲಿಲ್ಲ. ವೈಯಕ್ತಿಕವಾಗಿ ನನಗಿದು ಖುಷಿ ಕೊಟ್ಟಿದೆ ಎಂದಿದ್ದರು. ಅಷ್ಟೇ ಅಲ್ಲದೆ, ಈ ಕ್ಷಣವನ್ನು ಸಂಭ್ರಮಿಸಲು ಮುಂದಾಗಬೇಡಿ. ಮುಸ್ಲಿಂ ಧರ್ಮದವರನ್ನೂ ಜೊತಯಾಗಿ ಕರೆದುಕೊಂಡು ಹೋಗಬೇಕು. ಹೀಗಾಗಿ ವಿಜಯೋತ್ಸವ, ಮೆರವಣಿಗೆಗಳು ಬೇಡ. 

ಪರಸ್ಪರ ಸಹಕಾರದಿಂದ ಮಂದಿರ, ಮಸೀದಿ ಎರಡೂ ನಿರ್ಮಾಣವಾಗಲಿ. ಮಂದಿರ ನಿರ್ಮಾಣಕ್ಕೆ ಮುಸಲ್ಮಾನರ ಸಹಕಾರ ಬೇಕು. ಮಸೀದಿ ನಿರ್ಮಾಣಕ್ಕೆ ಹಿಂದೂಗಳೂ ಸಹಕರಿಸಲಿ ಎಂದು ಹೇಳುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com