ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ: ಮೂರನೇ ಬಾರಿಯಾದರೂ ಕೂಡ ಬರಲಿದ್ಯಾ ಮೂಹೂರ್ತ?

 ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆ ಸೋಮವಾರ ನಡೆಯುತ್ತದೆಯೆ ಇಲ್ಲವೇ ಎಂಬ ಪ್ರಶ್ನೆಗೆ ಶೇ.80 ರಷ್ಟು ಭಾಗ  ಉತ್ತರ ಇಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೇ ಚುನಾವಣೆ ಬಗ್ಗೆ ಪಕ್ಷಗಳು ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ, ಜೊತೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ,
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು:  ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆ ಸೋಮವಾರ ನಡೆಯುತ್ತದೆಯೆ ಇಲ್ಲವೇ ಎಂಬ ಪ್ರಶ್ನೆಗೆ ಶೇ.80 ರಷ್ಟು ಭಾಗ  ಉತ್ತರ ಇಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೇ ಚುನಾವಣೆ ಬಗ್ಗೆ ಪಕ್ಷಗಳು ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ, ಜೊತೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ,

ಪೇಜಾವರ ಶ್ರೀಗಳ ನಿಧನದಿಂದಾಗಿ ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ ಇರುವುದು ಬಿಬಿಎಂಪಿ ಚುನಾವಣೆಗೆ ಯಾವುದೇ ರೀತುಯ ಅಡ್ಡಿಯಾಗುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.


ಬಿಬಿಎಂಪಿ ಕೇಂದ್ರ ಕಚೇರಿಗೆ ಹೊಂದಿಕೊಂಡಂತೆ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು , ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು. ಯಾವುದೇ ರೀತಿಯ ವಿಜಯೋತ್ಸವ, ಮೆರವಣಿಗೆ, ಜಾಥಾ, ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ. ಶಸ್ತ್ರಗಳು, ಚಾಕು ಇನ್ನಿತರ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ.

ಒಂದು ವೇಳೆ ಚುನಾವಣೆ ನಡೆಯಬೇಕಾಗದರೇ ಕನಿಷ್ಠ 11 ಮಂದಿಯಾದರೂ ನಾಮಪತ್ರ ಸಲ್ಲಿಸಬೇಕಾಗಿದೆ. ಆದರೆ ಇವತ್ತು ಕೂಡ ಚುನಾವಣೆ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ.  ಬೆಳಗ್ಗೆ 9.30ರೊಳಗೆ ಕನಿಷ್ಠಸಂಖ್ಯೆಯ ನಾಮಪತ್ರ ಸಲ್ಲಿಕೆಯಾಗದಿದ್ದರೇ ಚುನಾವಣೆ ಮುಂದೂಡಲಾಗುತ್ತದೆ.

ಮೊದಲ ಬಾರಿ ನಿಗದಿಯಾಗಿದ್ದ ಸಮಯದಲ್ಲಿ ಬಿಬಿಎಂಪಿ ಮೇಯರ್ -ಉಪ ಮೇಯರ್ ಚುನಾವಣೆ ಇದ್ದ ಕಾರಣ ಮುಂದೂಡಲಾಗಿತ್ತು, ಎರಡನೇ ಬಾರಿ ಅಂದರೇ ಡಿಸೆಂಬರ್ 4 ರಂದು ನಿಗದಿ ಮಾಡಲಾಗಿತ್ತು, ಆದರೆ ವೇಳೆಗೆ ವಿಧಾನಸಭೆ ಉಪ ಚುನಾವಣೆ ನಡೆಯುತ್ತಿತ್ತು, ಹೀಗಾಗಿ ಮುಂದೂಡಲಾಗಿತ್ತು, ಇಂದು ಏನಾಗುವುದೋ ಎಂಬುದನ್ನು ಕಾದು ನೋಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com