ಮೇಲುಕೋಟೆಯ ಪಂಚಕಲ್ಯಾಣಿ ಜೀರ್ಣೋದ್ಧಾರಕ್ಕೆ ಇನ್ಫೋಸಿಸ್ ಫೌಂಡೇಶನ್ ನೆರವು

ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿರುವ ಪುರಾತನ ಕೊಳ ಪಂಚ ಕಲ್ಯಾಣಿ ಪುನರ್ನಿರ್ಮಾಣ ಯೋಜನೆಗೆ ಗುರುವಾರ ಚಾಲನೆ ಸಿಕ್ಕಿದೆ.

Published: 01st February 2019 12:00 PM  |   Last Updated: 01st February 2019 03:08 AM   |  A+A-


Infosys Foundation to help Pancha Kalyani lake restoration work in Mandya

ಮೇಲುಕೋಟೆಯ ಪಂಚಕಲ್ಯಾಣಿ ಜೀರ್ಣೋದ್ಧಾರಕ್ಕೆ ಇನ್ಫೋಸಿಸ್ ಫೌಂಡೇಶನ್ ನೆರವು

Posted By : RHN RHN
Source : The New Indian Express
ಬೆಂಗಳೂರು: ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿರುವ ಪುರಾತನ ಕೊಳ ಪಂಚ ಕಲ್ಯಾಣಿ ಪುನರ್ನಿರ್ಮಾಣ ಯೋಜನೆಗೆ ಗುರುವಾರ ಚಾಲನೆ ಸಿಕ್ಕಿದೆ.. ಇನ್ಫೋಸಿಸ್ ಫೌಂಡೇಶನ್, ಈ ಕೊಳದ  ಸಂರಕ್ಷಣೆ ಜೀರ್ಣೋದ್ದಾರ ಕಾರ್ಯಕ್ಕೆ ನೆರವು ನೀಡಲಿದೆ.

ಈ ಕೆರೆಯನ್ನು ಸ್ವಚ್ಚಗೊಳಿಸಿಇದರ ಜೀರ್ಣೋದ್ದಾರ ಮಾಡುವುದರೊಡನೆ ಇದರಲ್ಲಿ ತ್ಯಾಜ್ಯ, ಅನುಪಯುಕ್ತ ಸಂಗ್ರಹಗಳನ್ನು ತೆಗೆದು ಹಾಕಲಾಗುವುದು. ಆದರೆ ಕೆರೆಯ ರಚನೆಗೆ ಹ್ಯಾವುದೇ ಹಾನಿಯಾಗದಂತೆ ಈ ಕಾರ್ಯ ನಡೆಯಲಿದೆ. ಇದರ ಸಮೀಪದಲ್ಲಿರುವ ಗಣೇಶನ ಹೊಂಡದಿಂದ ಈ ಕೊಳಕ್ಕೆ ಸಂಪರ್ಕಿಸುವ ಕಾಲುವೆ ಮರುಸ್ಥಾಪನೆ ಮಾಡಲಾಗುವುದು. ಜತೆಗೆ ಎಲ್ಲಾ ಕೊಳಗಳನ್ನು ಸೇರಿಸಿ ಸುತ್ತಲೂ ಗೋಡೆಯನ್ನು ನಿರ್ಮಾಣ ಂಆಡಲಾಗುತ್ತದೆ. 

ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ "ಹೊಯ್ಸಳ, ವಿಜಯನಗರ, ಮೈಸೂರು ಒಡೆಯರ ಕಾಲದ ವಾಸ್ತುಶಿಲ್ಪ ನಿರ್ಮಾಣಗಳು ಮೇಲುಕೋಟೆಯಲ್ಲಿದೆ. ನಮ್ಮ ಪೂರ್ವಜರು ವೈಭವದ ಸಾಕ್ಷಿಯಾಗಿರುವ ಹಲವಾರು ಪರಂಪರಿಕ ರಚನೆಗಳನ್ನು ಅವರು ರಚಿಸಿದ್ದರು. ನಾವು ಅವುಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಅದು ನಮ್ಮ ಕರ್ತವ್ಯವೂ ಆಗಿದೆ.ಕೊಳದ ನೀರಿನ ಗುಣಮಟ್ಟ ಸುಧಾರಣೆ, ಮೇಲುಕೋಟೆಯ ನೈಸರ್ಗಿಕ ಪರಿಸರದ ಸಮತೋಲನ ಮರಳಿಸುವುದಕ್ಕೆ ಈ ಕೊಳದ ಪುನರುತ್ಥಾನ ಅಗತ್ಯವಾಗಿದೆ. ಇದೇ ಅಲ್ಲದೆ ಭವಿಷ್ಯದ ಪೀಳಿಗೆಗೆ ನಮ್ಮ ಈ ಶ್ರೀಮಂತ ಆಸ್ತಿಯನ್ನು ಉಳಿಸುವುದು ಸಹ ಮುಖ್ಯ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ "ಇಲ್ಲಿನ ಕೊಳಗಳು ದೇವಾಲಯ ಸಂಕೀರ್ಣದ ಅಂದ ಹೆಚ್ಚಿಸುವುದರೊಡನೆ ನೀರಿನ ಪ್ರಮುಖ ಮೂಲಗಳೂ ಆಗಿದೆ" ಎಂದಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp