ಜೋಳವನ್ನು ಬೇಯಿಸಲು ಸೋಲರ್ ಬಳಸಿದ ಬೆಂಗಳೂರು ಅಜ್ಜಿಯ ಕಾರ್ಯಕ್ಕೆ ನೆಟಿಗರಿಂದ ಮೆಚ್ಚುಗೆ!

ಸೌರಶಕ್ತಿಯ ಮಹತ್ವ ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸೋಲಾರ್ ಬಳಕೆಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
ಸೆಲ್ವಮ್ಮ
ಸೆಲ್ವಮ್ಮ
ಬೆಂಗಳೂರು: ಸೌರಶಕ್ತಿಯ ಮಹತ್ವ ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸೋಲಾರ್ ಬಳಕೆಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇನ್ನು ನಮ್ಮ ಬೆಂಗಳೂರಿನ ಅಜ್ಜಿಯೊಬ್ಬರು ವಿಧಾನಸೌಧದ ಮುಂಭಾಗದಲ್ಲಿ ಜೋಳ ಮಾರಿ ಜೀವನ ನಡೆಸುತ್ತಿದ್ದಾರೆ. 
ಕೈಯಿಂದ ಗಾಳಿಯನ್ನು ಬೀಸಿ ಜೋಳವನ್ನು ಬೇಯಿಸುವುದು ಕಷ್ಟ ಎಂದು ಅರಿತ ಅಜ್ಜಿ ಅದಕ್ಕೆ ಸೋಲಾರ್ ಪ್ಯಾನಲ್ ಬಳಸಿ ಅದಕ್ಕೆ ಫ್ಯಾನ್ ಅನ್ನು ಜೋಡಿಸಿ ಜೋಳ ಬೇಯಿಸಿಕೊಳ್ಳುತ್ತಿದ್ದು ಅಜ್ಜಿಯ ಬುದ್ಧಿವಂತಿಕೆಗೆ ನೆಟಿಗರು ಜೈ ಅನ್ನುತ್ತಿದ್ದಾರೆ. 
75 ವರ್ಷದ ಅಜ್ಜಿ ಸೆಲ್ವಮ್ಮ ಅವರು ಜೋಳ ಮಾರಿ ಜೀವನ ನಡೆಸುತ್ತಿದ್ದು, ವೈಯಸ್ಸು ಹೆಚ್ಚಾಗಿರುವುದರಿಂದ ಕೈಯಲ್ಲಿ ಗಾಳಿ ಬೀಸಿ ಜೋಳವನ್ನು ಬೇಯಿಸುವುದು ಕಷ್ಟವಾಗುತ್ತಿತ್ತು. ಇದಕ್ಕೆ ಮಾಡರ್ನ್ ಟಚ್ ನೀಡಿದ ಅಜ್ಜಿ ಇದೀಗ ಸುಲಭವಾಗಿ ಜೋಳವನ್ನು ಬೇಯಿಸುವ ವಿಧಾನವನ್ನು ಬಳಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com