ರೆಡ್ ಎಫ್ ಎಂ' ನಮ್ಮ ಬೆಂಗಳೂರು ಹಾಡು ಹಿಂದಿಮಯ' ಕನ್ನಡಿಗರ ಆಕ್ರೋಶ

ರೆಡ್ ಎಫ್ ಎಂ ರೇಡಿಯೊ ನಿರ್ಮಾಣ ಮಾಡಿರುವ 'ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು' ವಿಡಿಯೋ ಹಾಡು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನ ಸಾಹಿತ್ಯ ಸಂಪೂರ್ಣ ಹಿಂದಿಯಲ್ಲಿರುವುದು ಕನ್ನಡಿಗರಲ್ಲಿ ಆಕ್ರೋಶ ಮೂಡಿಸಿದೆ.
ಗೀತೆಯಲ್ಲಿರುವ ನತ್ಯ ರೂಪಕ
ಗೀತೆಯಲ್ಲಿರುವ ನತ್ಯ ರೂಪಕ

ಬೆಂಗಳೂರು: ರೆಡ್ ಎಫ್ ಎಂ ರೇಡಿಯೊ ನಿರ್ಮಾಣ ಮಾಡಿರುವ 'ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು' ವಿಡಿಯೋ ಹಾಡು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನ ಸಾಹಿತ್ಯ ಸಂಪೂರ್ಣ ಹಿಂದಿಯಲ್ಲಿರುವುದು ಕನ್ನಡಿಗರಲ್ಲಿ ಆಕ್ರೋಶ ಮೂಡಿಸಿದೆ.

ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿದ್ದು, ಕನ್ನಡವೇ ಆಡಳಿತ ಭಾಷೆಯಾಗಿದ್ದರೂ ಸಾಹಿತ್ಯವನ್ನು ಹಿಂದಿಯಲ್ಲಿ ಯಾಕೆ ರಚಿಸಲಾಗಿದೆ?ಉತ್ತರ ಭಾರತದ ಭಾಷೆ ಹಾಗೂ ಸಂಸ್ಕೃತಿಯನ್ನು ಮಿಳಿತ ಮಾಡಿರುವುದು ಏಕೆ ಎಂದು ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು ಎನ್ನುವ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಮಾತಿನೊಂದಿಗೆ ಆರಂಭವಾಗುವ ಈ ಹಾಡಿನಲ್ಲಿ  ನಟ ರಮೇಶ್ ಅರವಿಂದ್ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ, ನಟಿ ಕೃಷಿ ತಪಂದಾ, ವಸ್ತ್ರ ವಿನ್ಯಾಸಕಾರ ಪ್ರಸಾದ್ ಬಿದ್ದಪ್ಪ ಅವರನ್ನು ತೋರಿಸಲಾಗಿದೆ.

2 ನಿಮಿಷ 12 ಸೆಕೆಂಡ್ ಗಳ ಈ ವಿಡಿಯೋ ಸಾಂಗ್ ನ್ನು  ಫೆಬ್ರವರಿ 1 ರಂದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈವರೆಗೂ 3 ಸಾವಿರಕ್ಕೂ  ಹೆಚ್ಚು ಜನರು ವೀಕ್ಷಣೆ ಮಾಡಿದ್ದು, 65 ಜನರು ಲೈಕ್ ಮಾಡಿದ್ದರು, 658 ಜನರು ಡಿಸ್ ಲೈಕ್ ಮಾಡಿದ್ದಾರೆ.  ಬಹುತೇಕ ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲು ಆದ್ಯತೆ ನೀಡಬೇಕೆಂದು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡಾ ಈ ಹಾಡಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು ಎಂದು ನಾನು ಹೇಳಿದ್ದು, ಅದನ್ನು ಬಳಸಿ ಖಾಸಗಿ ರೇಡಿಯೋ ಸಂಸ್ಥೆ ತಮ್ಮಗೆ ಬೇಕಾದ ಹಾಗೆ ಹಾಡನ್ನು ರಚಿಸಿಕೊಂಡಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com